×
Ad

ಎಸಿಪಿ ಉದಯ ನಾಯಕ್‌ಗೆ ಭಡ್ತಿ

Update: 2018-07-29 19:50 IST

ಮಂಗಳೂರು, ಜು.29: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಕೇಂದ್ರ ವಲಯದ ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್ ಅವರಿಗೆ ನಾನ್‌ಐಪಿಎಸ್ ಎಸ್ಪಿಯಾಗಿ ಭಡ್ತಿ ನೀಡಿ ಸರಕಾರ ಆದೇಶ ಹೊರಡಿಸಿದೆ.

ಮಂಗಳೂರು ವೃತ್ತದ ಗುಪ್ತಚರ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿರುವುದಾಗಿ ತಿಳಿದು ಬಂದಿದೆ. ಉದಯ ನಾಯಕ್ ಈ ಹಿಂದೆ ಉಳ್ಳಾಲ ಮತ್ತು ಮಂಗಳೂರಿನಲ್ಲಿ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಂಚಾರ ವಿಭಾಗದ ಸಹಾಯಕ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News