×
Ad

ಅದೂರು ಮಜ್ಲಿಸ್ ಗ್ರಾಂಡ್ ಮಸೀದಿಯಲ್ಲಿ ಜುಮಾ ಪ್ರಾರಂಭ

Update: 2018-07-29 20:01 IST

ಮಂಗಳೂರು, ಜು. 29: ಕಾಸರಗೋಡು ಸಮೀಪದ ಅದೂರುನಲ್ಲಿ ಸೈಯದ್ ಅಶ್ರಫ್ ತಂಙಳ್ ಮದನಿ ಅಸ್ಸಖಾಫ್ ಅದೂರು ಸಾರಥ್ಯದಲ್ಲಿ ಮಜ್ಲಿಸ್ ಅದೂರು ಕ್ಯಾಂಪಸ್‌ನಲ್ಲಿ ನಿರ್ಮಿಸಿದ ಮಜ್ಲಿಸ್ ಗ್ರಾಂಡ್ ಮಸೀದಿಯಲ್ಲಿ ಜುಮಾ ಪ್ರಾರಂಭಗೊಂಡಿತು.

ಅಖಿಲ ಭಾರತ ಸುನ್ನಿ ಒಕ್ಕೂಟದ ಅಧ್ಯಕ್ಷ ಎ.ಪಿ ಅಬೂಬಕರ್ ಮುಸ್ಲಿಯರ್ ಕಾಂತಾಪುರಂ ಜುಮಾ ನಮಾಝ್ ನಿರ್ವಹಿಸಿಸುವ ಮೂಲಕ ಜುಮಾ ನಮಾಝಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮರ್ಕಝ್ ಸಂಸ್ಥೆಯ ವತಿಯಿಂದ 500 ಮಸೀದಿಯನ್ನು ಉಚಿತವಾಗಿ ನಿಮಿಸಿ ಕೊಟ್ಟಿವೆ. ಕರ್ನಾಟಕದಲ್ಲಿ ಸುಮಾರು 60 ಮಸೀದಿಗಳನ್ನು ನಿರ್ಮಿಸಲಾಗಿದೆ. ಮರ್ಕಝ್ ಅಧೀನ ಸಂಸ್ಥೆಯಾದ ಆರ್‌ಸಿಎಫ್‌ಐ ವತಿಯಿಂದ ಮಜ್ಲಿಸ್ ಗ್ರಾಂಡ್ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೆಳಿದರು.

ಸಚಿವ ಯು.ಟಿ. ಖಾದರ್ ಶುಭ ಹಾರೈಸಿದರು. ಸೈಯದ್ ಅಶ್ರಫ್ ತಂಙಳ್ ಮದನಿ ಅಸ್ಸಖಾಫ್ ಆದೂರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಇಬ್ರಾಹೀಂ ಪೂಕುಂಞಿ ತಂಙಳ್ ಕಲ್ಕಟ್ಟ, ಪಂಜಿಕಲ್ ತಂಙಳ್, ಸೈಯದ್ ಝೈನುಲ್ ಅಬಿದೀನ್ ಮುತ್ತುಕೋಯ ತಂಙಳ್ ಕನ್ನಾವಂ, ಸೈಯದ್ ಅಟ್ಟಕೋಯ ತಂಙಳ್ ಅದೂರು, ಸೈಯದ್ ಎ.ಪಿ.ಎಸ್ ತಂಙಳ್ ಆದೂರು, ಸೈಯದ್ ಮುಹಮ್ಮದ್ ಸಖಾಫ್ ತಂಙಳ್ ಮನ್ನಪಾರೆ, ಸೈಯದ್ ಹಸನ್ ಅಬ್ದುಲ್ಲಾ ಇಂಬಿಚ್ಚಿಕೋಯ ತಂಙಳ್, ಸೈಯದ್ ಖಾಸಿಂ ತಂಙಳ್ ಸಾಲೆತ್ತೂರು, ಎಸ್‌ವೈಎಸ್ ಮುಖಂಡ ಪಲ್ಲಂಗೋಡು ಅಬ್ದುಲ್ ಖಾದರ್ ಮದನಿ, ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ, ಯೂಸುಫ್ ಸಖಾಫಿ ಅದೂರು, ಮುಹಮ್ಮದ್ ಮದನಿ ರೆಂಜಾ, ರಫೀಕ್ ಸಅದಿ ಅದೂರು, ಹನೀಫ್ ಸಅದಿ, ಜಲಾಲುದ್ದೀನ್ ಅಲ್-ಜಮಾಲುಲೈ ತಂಙಳ್ ಮಲ್ಲಪುರಂ, ಸುರಿಬೈಲ್ ದಾರುಲ್ ಅಶ್-ಅರಿಯ್ಯಿ ಸಂಸ್ಥೆಯ ಮ್ಯಾನೇಜರ್ ಸಿ.ಎಚ್. ಮುಹಮ್ಮದಾಲಿ ಸಖಾಫಿ ಮತ್ತಿತರರು ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News