×
Ad

ಕಿನ್ಯದಲ್ಲಿ ಸಸಿ ವಿತರಣೆ ಕಾರ್ಯಕ್ರಮ

Update: 2018-07-29 20:08 IST

ಮಂಗಳೂರು, ಜು.29: ‘ವಿಶ್ವ ಶಾಂತಿಗೆ ಧಾರ್ಮಿಕ ವಿದ್ಯೆ’ ಎಂಬ ಧ್ಯೇಯವಾಕ್ಯದೊಂದಿಗೆ 60ನೇ ವಾರ್ಷಿಕ ಸಮ್ಮೇಳನಕ್ಕೆ ಸಜ್ಜಾಗುತ್ತಿರುವ ಸಮಸ್ತ ಕೇರಳ ಜಂಇಯ್ಯತ್ತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ (ಮದ್ರಸ ಅಧ್ಯಾಪಕರ ಒಕ್ಕೂಟ)ದ 60 ಕಾರ್ಯಯೋಜನೆಗಳ ಪೈಕಿ 10ನೆಯದಾದ ಸಸಿ ವಿತರಣೆ ಕಾರ್ಯಕ್ರಮವು ಕಿನ್ಯ ಕುತುಬಿಯ್ಯಾ ಮದ್ರಸದಲ್ಲಿ ಇತ್ತೀಚೆಗೆ ನಡೆಯಿತು.

ಸ್ಥಳೀಯ ಮುದರ್ರಿಸ್ ಅಬ್ದುಲ್ ಫತ್ತಾಹ್ ಫೈಝಿ ದುಆಗೈದು ಸಸಿ ವಿತರಿಸಿದರು. ಮದ್ರಸದ ಸದರ್ ಮುಅಲ್ಲಿಂ ಫಾರೂಕ್ ದಾರಿಮಿ ಗ್ರಾಮಚಾವಡಿ ಸ್ವಾಗತಿಸಿದರು.

ಮದ್ರಸದ ಮುಅಲ್ಲಿಮರಾದ ಅಲಿ ಹೈದರ್ ಫೈಝಿ, ಹನೀಫ್ ದಾರಿಮಿ ಪಜೀರ್, ಇಕ್ಬಾಲ್ ಮುಸ್ಲಿಯಾರ್ ಕಿನ್ಯ, ಅಬ್ದುಲ್ ಖಾದಿರ್ ಮುಸ್ಲಿಯಾರ್, ಅಬ್ದುಲ್ಲತೀಫ್ ಅಮಾನಿ, ಉಮರ್ ಅಝ್ಹರಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಅಬೂಸ್ವಾಲಿಹ್ ಹಾಜಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಇಸ್ಮಾಯೀಲ್ ಮಾಸ್ಟರ್, ಟಿ.ಎಂ. ಮುಹಮ್ಮದ್, ಅಬುಲ್ ಗೈಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News