×
Ad

ವೈಜ್ಞಾನಿಕವಾಗಿ ಆಟಿಯನ್ನು ನೋಡಬೇಕು: ಸುಧಾಕರ ಅಮೀನ್

Update: 2018-07-29 20:12 IST

ಕಾಪು, ಜು. 29: ಹಿಂದಿನ ಕಾಲದಲ್ಲಿ ಆಟಿ ತಿಂಗಳು ಕಷ್ಟದ ತಿಂಗಳಾಗಿತ್ತು. ಆದರೆ ಇಗ ಕಾಲ ಬದಲಾಗಿದೆ. ನಾವು ಎಲ್ಲವನ್ನೂ ವೈಜ್ಞಾನಿಕವಾಗಿ ನೋಡುವಂತಾಗಿದೆ ಎಂದು ಪಾಂಗಾಳ ಗುಡ್ಡೆ ಗರಡಿಮನೆ ಸುಧಾಕರ ಅಮೀನ್ ಹೇಳಿದರು.

ಅವರು ರವಿವಾರ ಯುವವಾಹಿನಿ ಕಾಪು ಘಟಕದ ವತಿಯಿಂದ ಕಾಪು ಬಿಲ್ಲವ ಸಹಾಯಕ ಸಂಘದ ಸಭಾಭವನದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯ ಕ್ರಮದಲ್ಲಿ ಮಾತನಾಡಿ, ಆಟಿ ತಿಂಗಳು ಅನಿಷ್ಠದ ತಿಂಗಳು ಅಲ್ಲವೇ ಅಲ್ಲ. ಆಟಿ ತಿಂಗಳಲ್ಲಿಯೇ ನಮ್ಮ ಮೂಲ ನಾಗರ ಪಂಚಮಿ ಹಬ್ಬಪ್ರಾರಂಭಗೊಳ್ಳುತ್ತದೆ ಎಂದರು.

ಬಿಲ್ಲವರು ಕೋಟಿ ಚೆನ್ನಯರ ಕಾಲದಲ್ಲಿ ವ್ಯದ್ಯರಾಗಿ ಸೇವೆ ಮಾಡಿದ್ದಾರೆ. ಅಲ್ಲದೆ ರಾಜಕಾರಣದಲ್ಲೂ ಮುಂಚೂಣಿ ಸ್ಥಾನದಲ್ಲಿ ಮೆರೆದವರಾಗಿದ್ದಾರೆ. ಆದ್ದರಿಂದ ಬಿಲ್ಲವರೆಂಬ ಕೀಳರಿಮೆ ನಮ್ಮಲ್ಲಿದ್ದರೆ, ಅದನ್ನು ಮೊದಲಿಗೆ ತೊಡೆದು ಹಾಕಿ. ನಾವೆಲ್ಲರೂ ಮಾನವರಾಗೋಣ ಎಂದರು.

ಕಾರ್ಯಕ್ರಮವನ್ನು ಕಾಪು ಬಿಲ್ಲವ ಸಂಘದ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ ಜ್ಯೊತಿ ಬೆಳಗಿಸಿ ಉಧ್ಘಾಟಿದರು. ಬಿಲ್ಲವ ಪರಿಷತ್ ಇದರ ಮಹಿಳಾ ಘಟಕಾಧ್ಯಕ್ಷೆ ಆಶಾ ಅಂಚನ್ ಚೆನ್ನೆ ಮಣೆ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್‌ರವರನ್ನು ಯುವವಾಹಿನಿ ವತಿಯಿಂದ ಸನ್ಮಾನಿಸಲಾಯಿತು. ಯುವವಾಹಿನಿ ಸದಸ್ಯರು ಮನೆಯಲ್ಲಿ ತಯಾರಿಸಿದ ಸುಮಾರು 30 ಬಗೆಯ ತಿನಿಸುಗಳನ್ನು ಸಭಿಕರಿಗೆ ಉಣ ಬಡಿಸಲಾಯಿತು.

ಕಾಪು ಘಟಕದ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು, ಕಾಪು ಬಿಲ್ಲವ ಸಹಾಯಕ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ಮಾಜಿ ಅಧ್ಯಕ್ಷ ಮಾಧವ ಪಾಲನ್, ಆಶಾ ಕಟಪಾಡಿ, ಲೋಕೇಶ್ ಹೆಜಮಾಡಿ, ಶಶಿಧರ ಸುವರ್ಣ, ಸುಧಾಕರ ಸಾಲ್ಯಾನ್, ಸೋಮನಾಥ, ಸುಕೇಶ್ ಎರ್ಮಾಳು, ಯೋಗೀಶ್ ಕೋಟ್ಯಾನ್, ಐತಪ್ಪ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News