×
Ad

ಯುಎಸ್ ನಿರ್ಬಂಧ: ದಾಖಲೆ ಕುಸಿತ ಕಂಡ ಇರಾನ್ ಕರೆನ್ಸಿ ಮೌಲ್ಯ

Update: 2018-07-29 21:15 IST

ಟೆಹ್ರಾನ್, ಜು.29: ಏರುತ್ತಿರುವ ಆರ್ಥಿಕ ಸಮಸ್ಯೆಗಳು ಮತ್ತು ಅಮೆರಿಕದಿಂದ ಎದುರಾಗಿರುವ ನಿರ್ಬಂಧದ ಪರಿಣಾಮವಾಗಿ ಇರಾನ್‌ನ ಕರೆನ್ಸಿ ರಿಯಾಲ್ ಡಾಲರ್ ಎದುರು ದಾಖಲೆಯ ಕುಸಿತ ಕಂಡಿದೆ. ರವಿವಾರದ ಹೊತ್ತಿಗೆ ಇರಾನ್ ರಿಯಾಲ್ ಮೌಲ್ಯ 1,00,000 ಪ್ರತಿ ಡಾಲರ್ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಕರೆನ್ಸಿ ಬೆಲೆಯಲ್ಲಿ ತಿಳಿಯಲು ಅತ್ಯಂತ ನಂಬಿಕಸ್ಥ ಜಾಲತಾಣವಾಗಿರುವ ಬೊನ್ಸಸ್ಟ್ ಪ್ರಕಾರ ರವಿವಾರ ಮಧ್ಯಾಹ್ನದ ವೇಳೆಗೆ ಇರಾನ್ ರಿಯಾಲ್ ಮೌಲ್ಯ 102,000ಕ್ಕೆ ಕುಸಿದಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಿಯಾಲ್ ತನ್ನ ಅರ್ಧಕ್ಕರ್ಧ ಮೌಲ್ಯವನ್ನು ಕಳೆದುಕೊಂಡಿದೆ. ಮಾರ್ಚ್ ತಿಂಗಳಲ್ಲಿ 50,000ದ ಮಟ್ಟವನ್ನು ದಾಟಿದ ನಂತರ ಇರಾನ್ ರಿಯಾಲ್ ನಿರಂತರ ಕುಸಿತ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಿಯಾಲ್ ಕುಸಿತದಿಂದ ಆತಂಕಿತರಾದ ಇರಾನ್‌ನ ಹೂಡಿಕೆದಾರರು ತಮ್ಮ ಉಳಿತಾಯವನ್ನು ಸುರಕ್ಷಿತವಾಗಿಡಲು ಡಾಲರ್ ಖರೀದಿಸಲು ಆರಂಭಿಸಿದ ಪರಿಣಾಮ ರಿಯಾಲ್ ಮತ್ತಷ್ಟು ಕುಸಿತ ಕಂಡಿದೆ. ಜೊತೆಗೆ ಕಡಿಮೆ ದರಕ್ಕೆ ತಮ್ಮಲ್ಲಿರುವ ಡಾಲರ್‌ಗಳನ್ನು ಮಾರಲು ಬ್ಯಾಂಕ್‌ಗಳು ನಿರಾಕರಿಸಿದ ಕಾರಣ ಆಮದುದಾರರ ಕೆಲವು ಗುಂಪುಗಳಿಗೆ ನೆರವಾಗುವಂತೆ ತಮ್ಮ ನಿಯಮಗಳಲ್ಲಿ ಸಡಿಲಿಕೆ ಮಾಡುವುದು ಸರಕಾರಕ್ಕೆ ಅನಿವಾರ್ಯವಾಗಿತ್ತು. ಈ ಎಲ್ಲ ಕಾರಣಗಳಿಂದ ಇರಾನ್ ರಿಯಾಲ್ ಡಾಲರ್ ಎಂದು ಮೌಲ್ಯ ಕಳೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News