ಯುಎಸ್ ಸೆನೆಟ್‌ನ ಭಾರತೀಯ-ಅಮೆರಿಕನ್ ಅಭ್ಯರ್ಥಿಯ ಮೇಲೆ ಜನಾಂಗೀಯ ಹಲ್ಲೆ

Update: 2018-07-29 15:56 GMT

ನ್ಯೂಯಾರ್ಕ್, ಜು.29: ಯುಎಸ್ ಸೆನೆಟ್‌ಗೆ ಸ್ಪರ್ಧಿಸುತ್ತಿದ್ದ ಭಾರತೀಯ ಅಮೆರಿಕನ್ ಅಭ್ಯರ್ಥಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಮಸಾಚುಸೆಟ್ಸ್‌ನ ಪುರಭವನದಲ್ಲಿ ನಡೆದಿದೆ ಎಂದು ಅಮೆರಿಕನ್ ಮಾಧ್ಯಮಗಳು ವರದಿ ಮಾಡಿವೆ.

 ಹಲ್ಲೆಗೊಳಗಾದ ಅಭ್ಯರ್ಥಿಯನ್ನು 54ರ ಹರೆಯದ ಶಿವ ಅಯ್ಯಾದುರೈ ಎಂದು ಗುರುತಿಸಲಾಗಿದೆ. ಇವರು ಹಾಲಿ ಸೆನೆಟ್ ಸದಸ್ಯೆ ಡೆಮಾಕ್ರಾಟಿಕ್ ಪಕ್ಷದ ಎಲಿಝಬೆತ್ ವಾರೆನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕಳೆದ ವಾರ ಈಕೆಯ ಬೆಂಬಲಿಗ ಅಯ್ಯಾದುರೈ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಗಳು ತಿಳಿಸಿವೆ. ಓರ್ವ ಪ್ರತಿಷ್ಠಿತ ವಿಜ್ಞಾನಿ ಹಾಗೂ ಆಡಳಿತಾರೂಡ ಪಕ್ಷದ ಪ್ರಬಲ ವಿಮರ್ಶಕರಾಗಿರುವ ಅಯ್ಯಾದುರೈ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಧರಿಸಿದ್ದ ಟಿ-ಶರ್ಟ್‌ನಲ್ಲಿ ಲಿಬರಲ್ ಹಾಗೂ ವಾರನ್ ಫೋರ್ ಸೆನೆಟ್ ಎಂದು ಬರೆಯಲಾಗಿತ್ತು ಎಂದು ವರದಿಗಳು ತಿಳಿಸಿವೆ. ಹಲ್ಲೆಕೋರ ಅಯ್ಯಾದುರೈಯವರ ಮುಖಕ್ಕೆ ಹೊಡೆದಿದ್ದು, ಅವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ವಾರೆನ್ ಅವರ ಬೆಂಬಲಿಗರ ಗುಂಪಿನಲ್ಲಿದ್ದ ಪೌಲ್ ಸೊಲೊವೆ ಎಂಬ 74ರ ಹರೆಯದ ವ್ಯಕ್ತಿ ಅಯ್ಯಾದುರೈ ಮೇಲೆ ಹಲ್ಲೆ ನಡೆಸಿದ್ದಾನೆ. ಮೊದಲಿಗೆ ಅಯ್ಯಾದುರೈ ಜೊತೆ ವಾಕ್ಸಮರದಲ್ಲಿ ತೊಡಗಿದ ಆರೋಪಿ ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News