ಭಿನ್ನ ಕೋಮಿನ ಮಹಿಳೆಯೊಂದಿಗೆ ಮಾತನಾಡಿದ ಆರೋಪ: ಯುವಕನಿಗೆ ಹಲ್ಲೆ
ಬಂಟ್ವಾಳ, ಜು. 29: ಭಿನ್ನ ಕೋಮಿನ ಮಹಿಳೆಯೊಂದಿಗೆ ಮಾತನಾಡಿದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗುಂಪುವೊಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ರವಿವಾರ ನಡೆದಿದೆ.
ಉಡುಪಿ ಕೋಟದ ನಿವಾಸಿ ಸುರೇಶ್ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಉಡುಪಿ ಕೋಟದ ನಿವಾಸಿಯಾದ ಸುರೇಶ್ ಎಂಬಾತ ತಮ್ಮ ಕಾರಿ ನಲ್ಲಿ ಕೆಲಸ ನಿಮಿತ್ತ ಬಂಟ್ವಾಳದಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಫರಂಗಿಪೇಟೆಯ ಬಸ್ ನಿಲ್ದಾಣದ ಬಳಿ ಮಧ್ಯಾಹ್ನ ತಮಗೆ ಪರಿಚಯದ ಮಹಿಳೆಯೊಬ್ಬರನ್ನು ನೋಡಿ ಕಾರು ನಿಲ್ಲಿಸಿದ್ದಾರೆ. ತದನಂತರ ಭಿನ್ನ ಕೋಮಿನ ಮಹಿಳೆಯೊಂದಿಗೆ ಮಾತನಾಡಿ ಅಲ್ಲಿಂದ ಹೊರಡುವಾಗ ಸುಮಾರು 8 ರಿಂದ 10 ಯುವಕರ ಗುಂಪೊದು ಕಾರನ್ನು ಅಡ್ಡಗಟ್ಟಿ ಸುರೇಶ್ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಹಲ್ಲೆ ಮಾಡಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಸೈ ಮತ್ತು ಸಿಬ್ಬಂದಿ ಧಾವಿಸಿ, ಅಲ್ಲಿ ಸೇರಿದ್ದ ಗುಂಪನ್ನು ಚದುರಿಸಿ, ಸುರೇಶ್ ಎಂಬಾತನನ್ನು ರಕ್ಷಣೆ ಮಾಡಿ, ತದನಂತರ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಸುರೇಶ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೊಪಿಗಳ ಬಗ್ಗೆ ಖಚಿತ ಮಾಹಿತಿ ಇದ್ದು, ಶೀಘ್ರವಾಗಿ ಬಂಧಿಸಲಾಗುವುದು. ಮಹಿಳೆಯನ್ನು ಅವರ ಸಂಬಂಧಿಕರೊಂದಿಗೆ ಸುರಕ್ಷಿತವಾಗಿ ಕಳುಹಿಸಲಾಗಿದ್ದು, ಸುರೇಶ್ ಎಂಬಾತನು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಆತನನ್ನು ಕೂಡಾ ಸಂಬಂಧಿಕರೊಂದಿಗೆ ಕಳುಹಿಸಲಾಗಿದೆ.
ಜಿಲ್ಲಾ ಎಸ್ಪಿ ರವಿಕಾಂತೇ ಗೌಡ