ಯೆನೆಪೊಯ (ಡೀಮ್ಡ್ ಟುಬಿ ) ವಿ.ವಿಯಿಂದ ನರ್ಸಿಂಗ್ ಪದವೀಧರರಿಗೆ ವಿಶೇಷ ತರಬೇತಿಗೆ ಚಾಲನೆ
Update: 2018-07-29 22:39 IST
ಮಂಗಳೂರು, ಜು. 29: ನರ್ಸಿಂಗ್ ಪದವೀಧರರಿಗೆ ‘ಫಿನಿಶಿಂಗ್ ಸ್ಕೂಲ್ ಫಾರ್ ನರ್ಸಸ್ ’ವಿಶೇಷ ಕಾರ್ಯಕ್ರಮ ವನ್ನು ಯೆನೆಪೊಯ ಡೀಮ್ಡ್ ಟುಬಿ ವಿಶ್ವ ವಿದ್ಯಾನಿಲಯದ ಸಂಯೋಜನೆಯ ನರ್ಸಿಂಗ್ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಆಧುನಿಕ ಸಂಕೀರ್ಣ ಕ್ಲಿನಿಕಲ್ ತರಬೇತಿ ಮತ್ತು ಸಿಮುಲೇಟ್ ಸೆಂಟರ್‌ನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯೆನೆಪೊಯ ಮೆಡಿಕಲ್ ಕಾಲೇಜಿನ ಡೀನ್ ಡಾ. ಎಂ.ಎಸ್. ಮೂಸಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಶ್ವ ವಿದ್ಯಾನಿಲಯದ ಕುಲ ಸಚಿವ ಡಾ.ಜಿ.ಶ್ರೀಕುಮಾರ್ ಮೆನನ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ತರಬೇತಿ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ಅರುಣ್ ಎಸ್.ನಾಥ್, ಡಾ.ಮುಹಮ್ಮದ್ ಗುತ್ತಿಗಾರ್,ಡಾ.ರಶ್ಮಿ ಜೈನ್ ಮೊದಾಲದವರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಮೇಘನಾ ಮುಕುಂದ್ ಸ್ವಾಗತಿಸಿದರು. ಪವಿತ್ರ ವಂದಿಸಿದರು. ನರ್ಸಿಂಗ್ ಕಾಲೇಜಿನ ಶೆರಿನ್‌ಮತ್ತು ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.