ಗಂಗೊಳ್ಳಿ ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಸಿಪಿಎಂ ನಿಯೋಗ ಭೇಟಿ
Update: 2018-07-29 22:41 IST
ಕುಂದಾಪುರ, ಜು.29: ಗಂಗೊಳ್ಳಿಯ ಕಡಲ್ಕೊರೆತ ಪ್ರದೇಶಕ್ಕೆ ಸಿಪಿಐಎಂ ಬೈಂದೂರು ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ನೇತೃತ್ವದ ನಿಯೋಗ ಇತ್ತೀಚೆಗೆ ಭೇಟಿ ನೀಡಿದೆ.
ತೆಂಗಿನ ತೋಟ, ಆಸ್ತಿ ಪಾಸ್ತಿ ಇತ್ಯಾದಿ ಆರ್ಥಿಕವಾಗಿ ಹಾನಿಗೊಳಗಾದ ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಿರುವ ನಿಯೋಗ, ಕಡಲ್ಕೊರೆತ ತಡೆ ಗಟ್ಟಲು ಶಾಶ್ವತ ಪರಿಹಾರಕ್ಕಾಗಿ ಸರಕಾರವನ್ನು ಒತ್ತಾಯಿಸಲು ಜಿಲ್ಲಾಧಿಕಾರಿ ಬಳಿ ನಿಯೋಗ ಹೋಗಲು ತೀರ್ಮಾನಿದೆ. ಸೂಕ್ತ ಪರಿಹಾರ ಸಿಗದಿದ್ದಲ್ಲಿ ಬೀದಿ ಗಿಳಿದು ಹೋರಾಟ ಮಾಡಲಾಗುವುದು ಎಂದು ನಿಯೋಗ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಚಿಕ್ಕ ಮೊಗವೀರ, ಅರುಣ ಕುಮಾರ, ಸುಶೀಲ ಗಂಗೊಳ್ಳಿ, ವೆಂಕಟೇಶ ಕೋಣಿ ಮೊದಲಾದವರು ಹಾಜರಿ ದ್ದರು.