×
Ad

ಸೋಲಾರ್ ವಿದ್ಯುತ್ ಬಳಕೆಯ ಪ್ರಯೋಗ: ಡಾ.ಶ್ರೀಕಾಂತ ರಾವ್

Update: 2018-07-29 22:49 IST

ಉಡುಪಿ, ಜು.29: ಲೇಖಕ ಡಾ.ಅಶೋಕ ಕುಂದಾಪುರ ಸೌರ ಒಲೆಗಳ ರಚನೆ ಹಾಗೂ ಸುಧಾರಣೆಗಳ ಕುರಿತು ಬರೆದಿರುವ ಸೋಲಾರ್ ಕುಕ್ಕರ್(ಸೌರ ಒಲೆಗಳ ವಿಸ್ಕೃತ ಮಾಹಿತಿ) ಪುಸಕ್ತ ಬಿಡುಗಡೆ ಸಮಾರಂಭವು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಜರಗಿತು.

ಪುಸ್ತಕ ಬಿಡುಗಡೆಗೊಳಿಸಿದ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಡಾ.ಶ್ರೀಕಾಂತ ರಾವ್ ಮಾತನಾಡಿ, ಸೌರ ಶಕ್ತಿಯನ್ನು ಸಮರ್ಪಕ ವಾಗಿ ಬಳಸುವ ಯೋಜನೆಯನ್ನು ಆಳವಡಿಸಿಕೊಂಡರೆ ದೇಶದ ವಿದ್ಯುತ್ ಕೊರತೆಯನ್ನು ನೀಗಿಸಬಹುದಾಗಿದೆ. ಸೋಲಾರ್ ತಂತ್ರಜ್ಞಾನವನ್ನು ಕೇವಲ ತಂತ್ರಜ್ಞಾನ ಎಂಬುದಾಗಿ ಪರಿಗಣಿಸದೆ ಬದುಕಿನ ಉಪಯೋಗ ಭಾಗವಾಗಿ ನೋಡಬೇಕು. ಆಗ ಸೋಲಾರ್ ತಂತ್ರಜ್ಞಾನದ ಬಗ್ಗೆ ಒಲವು ಮೂಡಲು ಸಾಧ್ಯ ಎಂದರು.

ಸೋಲಾರ್ ದುಬಾರಿ ಅಲ್ಲ. ಭಾರತದಲ್ಲಿ ಬೆಂಗಳೂರು ಸೋಲಾರ್ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಇತ್ತಿಚಿನ ದಿನಗಳಲ್ಲಿ ಹೊಸ ಕಟ್ಟಡಗಳಿಗೆ ಸೋಲಾರ್ ವಾಟರ್ ಹೀಟರ್‌ಗಳನ್ನು ಅಳವಡಿಸುವುದು ಕಡ್ಡಾಯಗೊಳಿಸ ಲಾಗಿದೆ. ಪವರ್ ಗ್ರಿಡ್ ಸ್ಥಿರೀಕರಣ, ಸೋಲಾರ್ ರೆಫ್ರಿಜರೆಷನ್ ಮತ್ತು ಏರ್ ಕಂಡೀಷನಿಂಗ್‌ಗಳಿಗೂ ಸೋಲಾರ್ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳಲಾ ಗುತ್ತಿದೆ. ಇನ್ನೂ ಅನೇಕ ಕ್ಷೆತ್ರಗಳಲ್ಲಿ ಸೋಲಾರ್ ವಿದ್ಯುತ್ ಬಳಕೆಯ ಪ್ರಯೋಗ ಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಎಂಐಟಿಯ ಸಹಾಯಕ ಪ್ರಾಧ್ಯಾಪಕ ಡಾ.ಅರುಣಾಚಲ ಚಂದಾವರ್ ಮಾತನಾಡಿದರು. ಲೇಖಕ ಡಾ.ಅಶೋಕ ಕುಂದಾಪುರ, ಎಂಜಿಎಂ ಕಾಲೇಜಿನ ಪ್ರಾಂಶುಾಲ ಡಾ.ಎಂ.ಜಿ.ವಿಜಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News