×
Ad

ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗದರ್ಶನ ಶಿಬಿರ

Update: 2018-07-29 22:52 IST

ಉಡುಪಿ, ಜು. 29: ಉಡುಪಿಯ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಶಿಕ್ಷಣ ಮಾರ್ಗದರ್ಶನ ಶಿಬಿರವು ಇತ್ತೀಚೆಗೆ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು.

ಭಾಗೀರಥಿ ಧನಂಜಯ ಆಚಾರ್ಯರು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯಅಧ್ಯಕ್ಷತೆ ವಹಿಸಿದ್ದರು. ಸಂಘದ ಹಿರಿಯ ಸದಸ್ಯ ಬಿ.ಎ.ಆಚಾರ್ಯ ಉಪಸ್ಥಿತರಿದ್ದರು. ದಾಮೋದರ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ದಿವಾಕರ ಆಚಾರ್ಯ ವಂದಿಸಿದರು. ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಉಡುಪಿ ತಾಲೂಕಿನ 40 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಬಿ.ಎ.ಆಚಾರ್ಯ ಮಣಿಪಾಲ ತಾಂತ್ರಿಕ ಶಿಕ್ಷಣ, ರಥ ಶಿಲ್ಪಿಗಣೇಶ ಆಚಾರ್ಯ ಹಿರಿಯಡ್ಕ ಪಂಚಶಿಲ್ಪ ಶಿಕ್ಷಣ ತರಬೇತಿ, ಡಾ.ಅಶೋಕ ಕುಂದಾಪುರ ವೈದ್ಯಕೀಯ ಶಿಕ್ಷಣ ಹಾಗು ಕೃಷ್ಣ ಬಿಲ್ಲವ ಬೈಂದೂರು ಸಾಮಾನ್ಯ ಶಿಕ್ಷಣದ ಕುರಿತು ಮಾಹಿತಿ ನೀಡಿ ಉದೊ್ಯೀಗ ಅವಕಾಶಗಳ ಬಗ್ಗೆ ತಿಳಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಾಸುದೇವ ಆಚಾರ್ಯ ವಹಿಸಿದ್ದರು. ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್ ನಿರ್ದೇಶಕ ಜಗದೀಶ ಆಚಾರ್ಯ ಕಪ್ಪೆಟ್ಟು, ಹುಬ್ಬಳ್ಳಿಯ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಭೀಮಸೇನ ಬಡಾಗೇರ್ ಮುಖ್ಯ ಅತಿಥಿಗಳಾಗಿದ್ದರು.

ಶಿಬಿರಾರ್ಥಿಗಳಾದ ಶ್ರೇಯ, ಸಿಂಚನ, ಅವಿನಾಶ್, ಸ್ವಾತಿ, ಅನ್ನಪೂರ್ಣ ತಮ್ಮ ಅನುಭವ ನಿವೇದನೆ ಮಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಬಡ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಜಯ ಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಅಲೆವೂರು ನಾಗರಾಜ ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News