ಹಲವು ಪ್ರಕರಣಗಳ ಆರೋಪ: ಇಬ್ಬರು ಬಾಲಕರ ಸೆರೆ

Update: 2018-07-29 17:28 GMT

ಮಂಗಳೂರು, ಜು.29: ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬಾಲಕರಿಬ್ಬರನ್ನು ಮುಲ್ಕಿ ಠಾಣಾ ವ್ಯಾಪ್ತಿಯ ಕೋಲ್ನಡ್ ಇಂಡಸ್ಟ್ರಿಯಲ್ ರಸ್ತೆಯ ಬಳಿ ರವಿವಾರ ಬಂಧಿಸಲಾಗಿದೆ.

ಪ್ರಕರಣವೊಂದರಲ್ಲಿ ಬಾಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಮುಲ್ಕಿ ವ್ಯಾಪಿಯಲ್ಲಿ 2016ರಿಂದ ಇಲ್ಲಿಯವರೆಗೆ ನಡೆದ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಲಿಂಗಪ್ಪಯ್ಯಕಾಡು ಬಳಿ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಆರು ಮೊಬೈಲ್ ಫೋನ್‌ಗಳು, ಕಾರ್ನಾಡು ಗ್ರಾಮದ ದರ್ಗಾ ರೋಡ್ ಬಳಿ ಹೀರೊ ಹೊಂಡಾ ಫ್ಯಾಶನ್ ಪ್ರೊ ಬೈಕ್, ಕೆಮ್ರಾಲ್ ಗ್ರಾಪಂ ಕಸ ವಿಲೇವಾರಿ ವಾಹನದ ಬ್ಯಾಟರಿ ಕಳವು, ಕಿಲ್ಪಾಡಿಯ ಗೇರುಕಟ್ಟೆಯಲ್ಲಿ ಹಾಲಿನ ಬೂತ್‌ನಲ್ಲಿ ನಗದು ಹಾಗೂ ಸಿರೇಟ್ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ.

ಅಲ್ಲದೆ, ಮುಲ್ಕಿ ವ್ಯಾಪ್ತಿಯ ಲಿಂಗಪ್ಪಯ್ಯಕಾಡು, ಕೋಲ್ನಾಡು, ಕಿನ್ನಿಗೋಳಿ, ಹಳೆಯಂಗಡಿ, ಕಾರ್ನಾಡು, ಮುಕ್ಕಾ, ಸುರತ್ಕಲ್‌ನ ವಿವಿಧೆಡೆ ಅಂಗಡಿ ಕಳವು, ನಿಲ್ಲಿಸಿದ ವಾಹನಗಳಿಂದ ಪೆಟ್ರೋಲ್, ಡೀಸೆಲ್ ಹಾಗೂ ಬ್ಯಾಟರಿಗಳನ್ನು ಕಳವು ಮಾಡಿದ ಆರೋಪ ಬಾಲಕರ ಮೇಲಿದೆ.

ಆರೋಪಿಗಳು ಕಳೆದ ಎರಡು ವರ್ಷಗಳಿಂದ ನಿರಂತರ ಕಳ್ಳತನ ನಡೆಸುತ್ತಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಕಳ್ಳತನದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ನಿರ್ದೇಶನದಂತೆ ಉತ್ತರ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ, ಪಿಎಸ್ಸೈಗಳಾದ ಶೀತಲ್ ಅಲಗೂರ ಹಾಗೂ ಕಮಲ, ಎಎಸ್ಸೈ ಚಂದ್ರಶೇಖರ್, ಸಿಬ್ಬಂದಿಯಾದ ಧರ್ಮೇಂದ್ರ, ಅಣ್ಣಪ್ಪ, ಮುಹಮ್ಮದ್ ಹುಸೈನ್, ಸುರೇಶ, ಚಂದ್ರಶೇಖರ್, ಹೋಮ್‌ಗಾರ್ಡ್ ಶಿವಾನಂದ ಭಾಗವಹಿಸಿದ್ದರು. ಈ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News