ಸಾಸ್ತಾನದಲ್ಲಿ ಸರಣಿ ಕಳ್ಳತನ

Update: 2018-07-29 17:32 GMT

ಕೋಟ, ಜು.29: ಸಾಸ್ತಾನ ಟೋಲ್ ಗೇಟ್ ಬಳಿಯ ಸೀತಾ ಕಾಂಪ್ಲೆಕ್ಸ್ ನಲ್ಲಿರುವ ನ್ಯೂ ಲಕ್ಷ್ಮೀ ಜ್ಯುವೆಲ್ಲರ್ಸ್‌ಗೆ ಜು. 28ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ.

ಗುಂಡ್ಮಿಯ ಕೃಷ್ಣಯ್ಯ ಆಚಾರ್ ಎಂಬವರ ಜುವೆಲ್ಲರ್ಸ್‌ನ ಶೆಟರನ್ನು ಮುರಿದು ಒಳನುಗ್ಗಿದ ಕಳ್ಳರು 20 ಸಾವಿರ ರೂ. ಮೌಲ್ಯದ 800 ಗ್ರಾಂ ತೂಕದ ಹಳೆಯ ಬೆಳ್ಳಿಯ ಪರಿಕರಗಳು ಹಾಗೂ 4,000 ರೂ. ನಗದು ಕಳವು ಮಾಡಿದ್ದಾರೆ.

ಅಲ್ಲಿಂದ ಕಳ್ಳರು 100 ಮೀಟರ್ ದೂರದಲ್ಲಿರುವ ಅಶೋಕ್ ಎಂಬವರ ಟೈಲರ್ ಅಂಗಡಿ, ರವಿರಾಜ್ ಎಂಬವರ ಕಂಪ್ಯೂಟರ್ ಅಂಗಡಿ, ಚಂದ್ರ ಮೋಹನ್ ಎಂಬವರ ಕಂಪ್ಯೂಟರ್ ಜಾಬ್‌ವರ್ಕ್ ಅಂಗಡಿಯ ಶಟರ್ ಮುರಿದು ಒಳನುಗ್ಗಿ ಕಳವಿಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News