ಆ. 4: ತುಳುಕೂಟ ಉಡುಪಿ ವತಿಯಿಂದ ಆಟಿಕೂಟ
Update: 2018-07-30 19:56 IST
ಉಡುಪಿ, ಜು.30: ತುಳುಕೂಟ ಉಡುಪಿ ಇದರ ವತಿಯಿಂದ ಅ.4ರಂದು ಸಂಜೆ 4 ಗಂಟೆಗೆ ಆಟಿ ಕೂಟ ಕಾರ್ಯಕ್ರಮವು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ನವೀನ್ ಇವರು ಆಟಿಯ ಬಗ್ಗೆ ಮಾಹಿತಿಯನ್ನು ನೀಡುವರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದ.ಕ.ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಭಾಗವಹಿಸು ವರು. ಇದೇ ಸಂದರ್ಭದಲ್ಲಿ ತುಳುಕೂಟದ ಮಹಿಳೆಯರು ವಿವಿಧ ಖಾದ್ಯಗಳನ್ನು ಮನೆಯಿಂದಲೇ ತಯಾರಿಸಿ ತಂದು ವಿತರಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕಿ ವೀಣಾ ಶೆಟ್ಟಿ ಹಾಗೂ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.