×
Ad

ಆ.1ರಂದು ‘ಅಲ್ ಫಲಾಹ್ ಕ್ಲಿನಿಕ್’ ಉದ್ಘಾಟನೆ

Update: 2018-07-30 20:07 IST

ಉಡುಪಿ, ಜು.30: ಜಮೀಯ್ಯತುಲ್ ಫಲಾಹ್ ಪ್ರಾಯೋಜಕತ್ವದಲ್ಲಿ ಕುಕ್ಕಿ ಕಟ್ಟೆ ಇಂದಿರಾನಗರದ ನಾಲ್ಕನೆ ಕ್ರಾಸ್‌ನಲ್ಲಿ ಆರಂಭಿಸಲಾಗಿರುವ ಅಲ್ ಫಲಾಹ್ ಕ್ಲಿನಿಕ್ ಇದರ ಉದ್ಘಾಟನಾ ಸಮಾರಂಭ ಆ.1ರಂದು ಸಂಜೆ 4ಗಂಟೆಗೆ ನಡೆಯಲಿದೆ.

ಕ್ಲಿನಿಕ್‌ನ್ನು ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ. ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಉಡುಪಿ ಘಟಕದ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್ ವಹಿಸಲಿರುವರು.

ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯೆ ಹೇಮಲತಾ ಹಿಲರಿ ಜತ್ತನ್ನ, ಮಿಶನ್ ಆಸ್ಪತ್ರೆ ವೈದ್ಯ ಡಾ.ಗಣೇಶ್ ಕಾಮತ್, ಅಲ್ ಫಲಾಹ್ ಕ್ಲಿನಿಕ್‌ನ ವೈದ್ಯ ಡಾ.ಮುಹ ಮ್ಮದ್ ಫಹೀಮ್ ಅಬ್ದುಲ್ಲಾ ಭಾಗವಹಿಸಲಿರುವರು.

ಈ ಕ್ಲಿನಿಕ್‌ನಲ್ಲಿ ಬಡವರಿಗೆ ಉಚಿತ ಸೇವೆಯನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News