×
Ad

ಮೂಡ್ಲಕಟ್ಟೆ: ಇಂಟೆಲಿಜೆಂಟ್ ಹೋಮ್ ಸಿಸ್ಟಮ್ ಅಭಿವೃದ್ಧಿ

Update: 2018-07-30 20:14 IST

ಕುಂದಾಪುರ, ಜು.30: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಹಮ್ಮದ್ ಆಸೀಮ್, ನಾಗಭೂಷಣ ಉಡುಪ, ವಾಗೀಶ್ ಪ್ರಸಾದ್ ಮತ್ತು ಸಾಕ್ಷಿ ಶೆಟ್ಟಿ ಇಂಟೆಲಿ ಜೆಂಟ್ ಹೋಮ್ ಸಿಸ್ಟಮ್ ಎಂಬ ಜನೋಪಯೋಗಿ ಪ್ರಾಜೆಕ್ಟ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈ ಪ್ರಾಜೆಕ್ಟನಿಂದ ಮೊಬೈಲ್ ಮತ್ತು ಕಂಪ್ಯೂಟರ್ ಮೂಲಕ ದೇಶದ ಯಾವುದೆ ಭಾಗದಿಂದ ಕೂಡ ತಮ್ಮ ಮನೆಯ ಫ್ಯಾನ್, ವಿದ್ಯುದ್ಪೀಪಗಳು ಹಾಗೂ ಯಾವುದೇ ಉಪಕರಣಗಳನ್ನೂ ನಿಯಂತ್ರಿಸಬಹುದು. ಗೃಹ ಬಳಕೆಯ ವಸ್ತುಗಳಲ್ಲದೆ ನೀರಾವರಿಗೆ ಬೇಕಾಗುವ ಪಂಪ್ ಸೆಟ್‌ಗಳನ್ನು ನಿಯಂತ್ರಿಸುವ ಆಯ್ಕೆಯನ್ನು ಕೊಡಲಾಗಿದೆ.

ಕೃಷಿ ಜಾಗದ ಮಣ್ಣಿನ ನೀರಿನ ಅಂಶ ಕಡಿಮೆಯಾದಲ್ಲಿ ಯಾವುದೆ ಮಾನವನ ಸಹಾಯವಿಲ್ಲದೆ ಸ್ವಯಂಚಾಲಿತವಾಗಿ ನೀರುಣಿಸುವ ಕೆಲಸ ಈ ಪ್ರಾಜೆಕ್ಟ ಮಾಡುತ್ತದೆ. ಹಾಗೆ ಬಿಟ್ಟ ನೀರಿನ ಪ್ರಮಾಣ ಸಾಕಾದಾಗ ಪಂಪ್‌ಗಳನ್ನು ಸ್ವಯಂ ಚಾಲಿತವಾಗಿ ಬಂದ್ ಮಾಡುವ ಆಯ್ಕೆಯನ್ನು ಕೊಡಲಾಗಿದೆ. ಪ್ರಾಜೆಕ್ಟನಲ್ಲಿ ಇನ್ಸ್ಟಾಗ್ರಾಂ ಮೂಲಕ ಸಂದೇಶ ಕಳುಹಿಸಿ, ಧ್ವನಿ ಸಹಾಯದಿಂದ ಕೂಡ ಎಲ್ಲಾ ಉಪಕರಣಗಳನ್ನು ನಿಯಂತ್ರಿಸುವ ಆಯ್ಕೆಗಳನ್ನು ಇಡಲಾಗಿದೆ. ಪಾರ್ಕಿಂಗ್ ಸಿಸ್ಟಂ, ಗ್ಯಾಸ್ ಸಿಲಿಂಡರ್ ನಿಯಂತ್ರಿಸುವ ವೈಶಿಷ್ಟ್ಯವನ್ನು ಇದು ಹೊಂದಿದೆ.

ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಮೆಲ್ವಿನ್ ಡಿಸೋಜ ಸಲಹೆ ಹಾಗೂ ಪ್ರೊ.ಶೈಲೇಶ್ ಬಿ.ಸಿ. ಮಾರ್ಗದರ್ಶನದಲ್ಲಿ ಈ ಪ್ರಾಜೆಕ್ಟ್ ತಯಾರಿಸ ಲಾಗಿದ್ದು ವಿದಾರ್ಥಿಗಳ ಕಾರ್ಯವೈಖರಿಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧಾರ್ಥ ಶೆಟ್ಟಿ, ಪ್ರಾಂಶುಪಾಲ ಡಾ.ಕಾಟಯ್ಯ, ಶೈಕ್ಷಣಿಕ ನಿರ್ದೇಶಕರಾದ ಡಾ.ಚಂದ್ರಶೇಖರ್ ರಾವ್, ಡಾ.ಅರುಣ್‌ಕಾಶಿ ಪ್ರಶಂಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News