×
Ad

ಬಡ ವ್ಯಾಪಾರಿಗೆ ಸೈಕಲ್, ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

Update: 2018-07-30 20:17 IST

ಉಡುಪಿ, ಜು. 30: ಲಯನ್ಸ್ ಕ್ಲಬ್ ಉಡುಪಿ ಕರಾವಳಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ಇತ್ತೀಚೆಗೆ ಉಡುಪಿ ಟೌನ್ ಹಾಲ್‌ನ ಸಭಾಂಗಣ ದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಡಾ.ಎಂ.ಕೆ.ಭಟ್ ನೂತನ ಅಧ್ಯಕ್ಷ ರವೀಂದ್ರ ಆಚಾರ್ಯರಿಗೆ ಪದವಿ ಪ್ರದಾನ ಮಾಡಿದರು. ಕಾರ್ಯದರ್ಶಿಯಾಗಿ ದಯಾನಂದ ಆಚಾರ್ಯ, ಕೋಶಾಧಿಕಾರಿಯಾಗಿ ಮುರಳೀಧರ್  ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭದಲ್ಲಿ ನಿಗರ್ಮನ ಅಧ್ಯಕ್ಷ ಹರೀಶ್ ಪೂಜಾರಿ ದಂಪತಿಯನ್ನು ಸನ್ಮಾನಿಸಲಾಯಿತು. ಆರ್ಥಿಕ ಸಂಕಷ್ಟದಲ್ಲಿರುವ ಗೋಲಿ ಸೋಡ ವ್ಯಾಪಾರಿ ಸೀನ ನಾಯ್ಕರವರಿಗೆ ಸೈಕಲ್‌ನ್ನು ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅನಾರೋಗ್ಯ ಪೀಡಿತರಿಗೆ ಧನಸಹಾಯ ವಿತರಿಸಲಾಯಿತು.

ಕ್ಯಾಬಿನೆಟ್ ಕಾರ್ಯದರ್ಶಿ ಸುನೀಲ್ ಸಾಲ್ಯಾನ್, ಮಾಜಿ ಜಿಲ್ಲಾ ಗವರ್ನರ್ ಶ್ರೀಧರ್ ಶೇಣವ, ಸುನೀಲ್ ಶೆಟ್ಟಿ, ಸದಾನಂದ ನಾಯಕ್, ವಲಯ ಅಧ್ಯಕ್ಷ ನೇರಿ ಕರ್ನೇಲಿಯೋ, ಆಂಡ್ರಿ ಡಿಸೋಜ, ನೂತನ ಸದಸ್ಯರುಗಳಾದ ಇ.ಪಿ. ರಮೇಶ್, ಅಶೋಕ್ ಆಚಾರ್ಯ, ರಮಾನಂದ ಶೆಟ್ಟಿಗಾರ್, ಪ್ರಶಾಂತ್ ಸಾಗರ್, ಮಹೇಂದ್ರ ಪ್ರವೀಣ್ ಕೆ., ಉಮಾಶಂಕರ್, ಎಡ್ವರ್ಡ್ ಮಿಸ್ಕಿತ್ ಉಪಸ್ಥಿತರಿದ್ದರು. ಸುರೇಶ್ ಬೀಡು ವಂದಿಸಿದರು. ಕೆ.ಸಿ.ಅಮೀನ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News