ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿರುವ ಕೇರಳ ಸಿಎಂ ಪಿಣರಾಯಿ ವಿಜಯನ್

Update: 2018-07-30 14:53 GMT

ಕೊಚ್ಚಿ, ಜು.30: ಮುಂದಿನ ತಿಂಗಳು ಕೇರಳ ಸಿಎಂ ಪಿಣರಾಯಿ ವಿಜಯನ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಆಗಸ್ಟ್ 19ರಂದು ಅವರು ಕೇರಳದಿಂದ ತೆರಳಲಿದ್ದು, ಸೆಪ್ಟಂಬರ್ 6ರಂದು ವಾಪಸಾಗಲಿದ್ದಾರೆ.

ರೋಚ್ ಸ್ಟರ್ ನ ಮಿನೆಸೊಟಾದಲ್ಲಿರುವ ಮಾಯೋ ಕ್ಲಿನಿಕ್ ನಲ್ಲಿ ಅವರು ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದು, ಹೆಚ್ಚಿನ ಚಿಕಿತ್ಸೆಯನ್ನೂ ಪಡೆಯಲಿದ್ದಾರೆ. ಯಾವ ಸಮಸ್ಯೆಗಾಗಿ ಅವರು ಚಿಕಿತ್ಸೆ ಪಡೆಯಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಈ ಭೇಟಿಯ ಎಲ್ಲಾ ವೆಚ್ಚವನ್ನೂ ರಾಜ್ಯ ಸರಕಾರವೇ ಭರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News