×
Ad

ಗುಡ್ಡೆಅಂಗಡಿ ಮದ್ರಸ ಶಿಕ್ಷಕ-ರಕ್ಷಕ ಸಭೆ

Update: 2018-07-30 21:04 IST

ಬಂಟ್ವಾಳ, ಜು. 30: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ನೂರುದ್ದೀನ್ ಮದ್ರಸದ ಶಿಕ್ಷಕ-ರಕ್ಷಕ ಸಭೆಯು ರವಿವಾರ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಇದೇ ವೇಳೆ ಸಜಿಪ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಇದರ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ನೂರುದ್ದೀನ್ ಮದ್ರಸದ ಮುಖ್ಯ ಶಿಕ್ಷಕ ಮುಹಮ್ಮದ್ ಶರೀಫ್ ಮೌಲವಿ ಪರಪ್ಪು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮರ್ ಫಾರೂಕ್, ಖತೀಬ್ ಮುಹಮ್ಮದ್ ಶರೀಫ್ ದಾರಿಮಿ ಮಾಡಾವು, ಮದ್ರಸ ಶಿಕ್ಷಕರಾದ ಮುಹಮ್ಮದ್ ಶರೀಫ್ ಮೌಲವಿ ಪರಪ್ಪು, ಸೈದಾಲಿ ಮುಸ್ಲಿಯಾರ್ ಬುಡೋಳಿ, ಎಸ್.ಎಂ. ಅಬ್ಬಾಸ್ ಮುಸ್ಲಿಯಾರ್ ಸಾಲೆತ್ತೂರು, ಮಸೀದಿ ಪದಾಧಿಕಾರಿಗಳಾದ ಎಸ್. ಮುಹಮ್ಮದ್, ಮುಹಮ್ಮದ್ ಬಶೀರ್, ಮುಹಮ್ಮದ್ ಹನೀಫ್ ಎಸ್.ಎಂ.ಎನ್., ಪಿ.ಬಿ. ಹಾಮದ್ ಹಾಜಿ, ಅಬ್ದುಲ್ಲಾ ಜಿ.ಎ., ಅಬೂಬಕರ್ ಮೆಲ್ಕಾರ್, ಯಾಕೂಬ್ ಪಿ., ಅಬೂಬಕರ್ ಸಿದ್ದೀಕ್, ಅಬ್ದುಲ್ ಮಜೀದ್ ದರ್ಖಾಸ್, ಮಜೀದ್ ರಿಕ್ಷಾ, ಮಜೀದ್ ಮೇಸ್ತ್ರಿ, ಹಾಜಿ ಇಸ್ಮಾಯಲ್ ಶಾಫಿ, ನೌಫಲ್ ಜಿ.ಎ., ಸೈಫುದ್ದೀನ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News