×
Ad

ತುಂಬೆ ರೇಚಕ ಸ್ಥಾವರ ದುರಸ್ತಿ: ಆ.1ರಂದು ನೀರು ವಿತರಣೆ ಸ್ಥಗಿತ

Update: 2018-07-30 21:07 IST

ಮಂಗಳೂರು, ಜು. 30: ತುಂಬೆ ರೇಚಕ ಸ್ಥಾವರದ ಜಾಕ್‌ವೆಲ್‌ನಲ್ಲಿ ಮರಳು, ಕಸಕಡ್ಡಿ, ಮಡ್ಡಿ ಶೇಖರಣೆಗೊಂಡಿದ್ದು, ದುರಸ್ತಿ ಕಾರ್ಯವನ್ನು ಆ.1ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಅವಧಿಯಲ್ಲಿ ಮಂಗಳೂರು ನಗರ ಭಾಗಶಃ ಪ್ರದೇಶ, ಕೋಡಿಕಲ್, ಕೊಟ್ಟಾರ, ಜಲ್ಲಿಗುಡ್ಡ, ಕೂಳೂರು, ಪಣಂಬೂರು, ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ನೀರು ವಿತರಣೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ರೇಚಕ ಸ್ಥಾವರದ ಜಾಕ್‌ವೆಲ್, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ, ಜಾಕ್‌ವೆಲ್‌ನ್ನು ಶುಚಿಗೊಳಿಸುವುದು, ಕೊಟ್ಟಾರ ಚೌಕಿ ಹೋಂಡಾ ಶೋರೂಂ ಎದುರು ಬದಿ 900 ಎಂ.ಎಂ. ವ್ಯಾಸದ ಮುಖ್ಯ ಕೊಳವೆಯಲ್ಲಿ ಸೋರುವಿಕೆ ಉಂಟಾಗುತ್ತಿದೆ. ಕೊಳವೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲಿದ್ದು, ನೀರು ವಿತರಣೆ ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News