ಯೂತ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್‌ಗೆ ಮೂರು ಪದಕ
Update: 2018-07-30 21:11 IST
ಮೂಡುಬಿದಿರೆ, ಜು.30: ಗುಜರಾತ್ ವಡೋದರದಲ್ಲಿ ನಡೆದ ಯೂತ್ ನ್ಯಾಷನಲ್ ಚಾಂಪಿ0ುನ್ ಶಿಪ್‌ನಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೂರು ಮಂದಿ ಕ್ರೀಡಾಪಟುಗಳು ಪದಕವನ್ನು ಪಡೆದಿರುತ್ತಾರೆ.
ಬಾಲಕಿಯರ ವಿಭಾಗದ ಎತ್ತರಜಿಗಿತದಲ್ಲಿ ಸುಪ್ರೀಯ ಬಿ.ಎಸ್ 1.75 ಮೀ ಎತ್ತರ ಜಿಗಿದು ಚಿನ್ನದ ಪದಕದೊಂದಿಗೆ ಹೊಸ ಕೂಟದಾಖಲೆ ನಿರ್ಮಿಸಿದ್ದಾರೆ ಹಾಗೂ ಜೋಸ್ನ 100 ಮೀ ನಲ್ಲಿ 12.23 ಸೆಕೆಂಡ್ಸ್ ಓಡಿ ಚಿನ್ನದ ಪದಕವನ್ನು ಮತ್ತು ಸೃಷ್ಟಿ ಇವರು ಚಕ್ರ ಎಸೆತದಲ್ಲಿ 37.68 ಮೀ ಎಸೆದು ಕಂಚಿನ ಪದಕವನ್ನು ಪಡೆದಿರುತ್ತಾರೆ. ಯೂತ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅಭಿನಂದನೆ ವ್ಯಕ್ತಪಡಿಸಿದ್ದಾರೆ.