ಮೆಹುಲ್ ಚೋಕ್ಸಿ ಬಂಧಿಸಿ, ಪ್ರಯಾಣ ನಿರ್ಬಂಧಿಸಿ: ಆಂಟಿಗುವಾಕ್ಕೆ ಮನವಿ ಮಾಡಿದ ಭಾರತ

Update: 2018-07-30 15:50 GMT

ಹೊಸದಿಲ್ಲಿ, ಜು. 30: ಪಿಎನ್‌ಬಿ ಹಗರಣದ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೋಕ್ಸಿ ಕೆರಿಬಿಯನ್ ದ್ವೀಪದಲ್ಲಿ ಇರುವ ಬಗ್ಗೆ ಮಾಹಿತಿ ಸ್ವೀಕರಿಸಿದ ಬಳಿಕ ಅವರನ್ನು ವಶಕ್ಕೆ ತೆಗೆದು ಕೊಳ್ಳುವಂತೆ ಭಾರತ ಆಂಟಿಗುವಾ ಹಾಗೂ ಬರ್ಬುಡಾ ಆಡಳಿತದಲ್ಲಿ ಮನವಿ ಮಾಡಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

 ಮೆಹುಲ್ ಚೋಕ್ಸಿಯ ಇರುವಿಕೆ ಬಗ್ಗೆ ಮಾಹಿತಿ ದೊರಕಿದ ಬಳಿಕ ಭಾರತ ಕೆರಿಬಿಯನ್ ದ್ವೀಪದೊಂದಿಗೆ ಸಂಪರ್ಕದಲ್ಲಿದೆ. ಜಲ, ವಾಯು ಹಾಗೂ ರಸ್ತೆಯಲ್ಲಿ ಮೆಹುಲ್ ಚೋಕ್ಸಿಯ ಚಲನವಲನ ನಿರ್ಬಂಧಿಸುವಂತೆ ಮನವಿ ಮಾಡಿದೆ. ಆಂಟಿಗುವಾದಲ್ಲಿ ಮೆಹುಲ್ ಚೋಕ್ಸಿಯ ಇರುವಿಕೆ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಸ್ವೀಕರಿಸಿದ ಕೂಡಲೇ, ಜಾರ್ಜ್‌ಟೌನ್ ನಲ್ಲಿರುವ ನಮ್ಮ ಹೈಕಮಿಷನ್ ಮೆಹುಲ್ ಚೋಕ್ಸಿ ಅವರ ಇರುವಿಕೆ ಬಗ್ಗೆ ಆಂಟಿಗುವಾ ಹಾಗೂ ಬರ್ಬುಡಾ ಸರಕಾರವನ್ನು ಸಂಪರ್ಕಿಸ ದೃಢಪಡಿಸಿಕೊಂಡರು. ಅವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಹಾಗೂ ಅವರು ಜಲ ವಾಯು, ರಸ್ತೆ ಸಂಚಾರದ ಮೇಲೆ ನಿರ್ಬಂಧ ಹೇರುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

 ನಮ್ಮ ಹೈಕಮಿಷನ್ ಆಂಟಿಗುವಾ ಹಾಗೂ ಬರ್ಬುಡಾ ಸರಕಾರದ ಸಂಬಂಧಿತ ಅಧಿಕಾರಿಗಳನ್ನು ಸೋಮವಾರ ಭೇಟಿಯಾದರು. ಈ ವಿಷಯದ ಪರಿಶೀಲನೆಗೆ ಆಂಟಿಗುವಾ ಹಾಗೂ ಬರ್ಬುಡಾ ಸರಕಾರ ಹಾಗೂ ಸರಕಾರದ ಸಂಬಂಧಿತ ಸಂಸ್ಥೆಗಳೊಂದಿಗೆ ಸಂಪರ್ಕ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News