ಇಮ್ರಾನ್ ಖಾನ್ ಗೆ ಕರೆಮಾಡಿ ಅಭಿನಂದಿಸಿದ ಮೋದಿ
Update: 2018-07-30 22:32 IST
ಹೊಸದಿಲ್ಲಿ, ಜು.30: ಪಾಕಿಸ್ತಾನದ ಭಾವಿ ಪ್ರಧಾನಿ ಇಮ್ರಾನ್ ಖಾನ್ ರಿಗೆ ಕರೆ ಮಾಡಿರುವ ಪ್ರಧಾನಿ ಮೋದಿ ಚುನಾವಣೆಯಲ್ಲಿನ ಭಾರೀ ಗೆಲುವಿಗಾಗಿ ಅವರನ್ನು ಅಭಿನಂದಿಸಿದ್ದಾರೆ.
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವು ಗಟ್ಟಿಯಾಗಿ ನೆಲೆಯೂರಬಹುದು ಎಂದು ಮೋದಿ ಇದೇ ಸಂದರ್ಭ ಭರವಸೆ ವ್ಯಕ್ತಪಡಿಸಿದರು ಎನ್ನಲಾಗಿದೆ. ಸುತ್ತಮುತ್ತಲಿನ ದೇಶಗಳ ನಡುವೆ ಶಾಂತಿ, ಸೌಹಾರ್ದತೆ ಹಾಗು ಅಭಿವೃದ್ಧಿಯ ಬಗ್ಗೆಯೂ ಮೋದಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.