×
Ad

ಪುರುಷೋತ್ತಮ ಪೂಂಜಾಗೆ ಸರ್ಪಂಗಳ ಪ್ರಶಸ್ತಿ ಪ್ರದಾನ

Update: 2018-07-30 22:37 IST

ಉಡುಪಿ, ಜು.30: ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟ ಅವರ ಸ್ಮರಣಾರ್ಥ ಯಕ್ಷಗಾನ ಕಲಾ ಸಾಧಕ ‘ಸರ್ಪಂಗಳ ಪ್ರಶಸ್ತಿ’ ಪ್ರದಾನ ಹಾಗೂ ಸಂಸ್ಮರಣ ಕಾರ್ಯಕ್ರಮ ಉಡುಪಿಯ ಪೂರ್ಣಪ್ರಜ್ಞಾ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಹಿರಿಯ ಯಕ್ಷಗಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಇವರಿಗೆ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ಸಂಘಟಕರ ಪರವಾಗಿ ಡಾ.ನರೇಂದ್ರ ಶೆಣೈ, ಡಾ. ಶೈಲಜಾ ಭಟ್, ಜೈದೀಪ್, ರಮ್ಯಲಕ್ಷ್ಮೀ, ಕಲಾರಂಗದ ಅಧ್ಯಕ್ಷ ಕೆ. ಗಣೇಶ ರಾವ್, ಪೂಂಜಾ ಅವರ ಪತ್ನಿ ಶೋಭಾ, ಕಲಾಪೋಷಕಿ ನಳಿನಿ ಎಸ್. ಭಟ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಶಸ್ತಿ ವಿಜೇತ ಕಲಾವಿದರನ್ನು ಅಭಿನಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ಸಂದರ್ಭದಲ್ಲಿ ನೇಪಥ್ಯ ಕಲಾವಿದ ಕೃಷ್ಣಪ್ಪ ಪೂಜಾರಿ ಮಣಿುಜಲು ಅವರನ್ನು ಗೌರವಿಸಲಾಯಿತು.

ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಚಕ್ರವ್ಯೆಹ-ಪದ್ಮವ್ಯೆಹ ಯಕ್ಷಗಾನ ಪ್ರದರ್ಶನ ಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News