ಮಕ್ಕಳ ಅತ್ಯಾಚಾರಿಗೆ ಮರಣದಂಡನೆ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
Update: 2018-07-30 23:08 IST
ಹೊಸದಿಲ್ಲಿ, ಜು. 30: ಹನ್ನೆರೆಡು ವರ್ಷಕ್ಕಿಂತ ಕೆಳಗಿನ ಬಾಲಕಿಯರ ಅತ್ಯಾಚಾರ ಪ್ರಕರಣದ ಅಪರಾಧಿಗೆ ಮರಣದಂಡನೆ ವಿಧಿಸುವ ನಿರ್ಣಾಯಕ ಮಸೂದೆಗೆ ಲೋಕಸಭೆಯಲ್ಲಿ ಸೋಮವಾರ ಅನುಮೋದನೆ ನೀಡಲಾಯಿತು.
ಜಮ್ಮು ಹಾಗೂ ಕಾಶ್ಮೀರದ ಕಥುವಾದಲ್ಲಿ ಬಾಲಕಿಯ ಅತ್ಯಾಚಾರ ಹಾಗೂ ಉತ್ತರಪ್ರದೇಶದ ಉನ್ನಾವೊಂದಲ್ಲಿ ಯುವತಿಯ ಅತ್ಯಾಚಾರ ಘಟನೆಗಳ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಏಪ್ರಿಲ್ 21ರಂದು ಆಧ್ಯಾದೇಶ ಘೋಷಿಸಲಾಗಿತ್ತು. ಅದರ ಬದಲಿಗೆ ಈಗ ಈ ಕ್ರಿಮಿಲ್ ಕಾನೂನು (ತಿದ್ದುಪಡಿ) ಅಸ್ತಿತ್ವಕ್ಕೆ ಬರಲಿದೆ.
ಕ್ರಿಮಿನಲ್ ಕಾನೂನು (ತಿದ್ದುಪಡಿ) ಮಸೂದೆ-2018ಕ್ಕೆ ಹೆಚ್ಚಿನ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು ಹಾಗೂ ಧ್ವನಿ ಮತದ ಮೂಲಕ ಅಂಗೀಕರಿಸಿದರು.