×
Ad

ದೇರಳಕಟ್ಟೆ ವಲಯ ಜಮೀಯ್ಯತುಲ್ ಮುಅಲ್ಲಿಮೀನ್ ನೂತನ ಪದಾಧಿಕಾರಿಗಳ ಆಯ್ಕೆ

Update: 2018-07-30 23:29 IST

ಮಂಗಳೂರು, ಜು.30: ದೇರಳಕಟ್ಟೆ ವಲಯ ಮದ್ರಸ ಅಧ್ಯಾಪಕರ ಒಕ್ಕೂಟದ ವಾರ್ಷಿಕ ಮಹಾಸಭೆಯು ದೇರಳಕಟ್ಟೆ ಹಯಾತುಲ್ ಇಸ್ಲಾಮ್ ಕೇಂದ್ರ ಮದ್ರಸದಲ್ಲಿ ನಡೆಯಿತು.

ಸ್ಥಳೀಯ ಖತೀಬರಾದ ಮುಹಮ್ಮದ್ ಶರೀಫ್ ಅರ್ಶದಿ ಸಭೆಯನ್ನು ಉದ್ಘಾಟಿಸಿದರು. ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಮುಫತ್ತಿಶರಾದ ಉಮರುಲ್ ಫಾರೂಕ್ ದಾರಿಮಿ ತೆಕ್ಕಾರು ಅಧ್ಯಕ್ಷತೆ ವಹಿಸಿದ್ದರು.

ಸ್ಥಳೀಯ ಜಮಾಅತ್ ಅಧ್ಯಕ್ಷ ಅಬ್ಬಾಸ್ ಹಾಜಿ, ದೇರಳಕಟ್ಟೆ ವಲಯ ಆಡಳಿತಾತ್ಮಕ ಅಧ್ಯಕ್ಷ ಇಸ್ಮಾಯೀಲ್ ಹಾಜಿ ದೇರಳಕಟ್ಟೆ, ಉಪಾಧ್ಯಕ್ಷ ಅಬೂಬಕರ್ ಹಾಜಿ, ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಉಪಸ್ಥಿತರಿದ್ದರು.

 ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ, ಉಪಾಧ್ಯಕ್ಷರಾಗಿ ಅಬ್ದುಲ್ಲ ಫೈಝಿ ದೇರಳಕಟ್ಟೆ, ಅಬ್ದುರ್ರಝಾಕ್ ಅಝ್ಹರಿ ಮಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಉಮರುಲ್ ಫಾರೂಕ್ ದಾರಿಮಿ ಗ್ರಾಮಚಾವಡಿ, ಜೊತೆ ಕಾರ್ಯದರ್ಶಿಗಳಾಗಿ ಇರ್ಫಾನ್ ಮೌಲವಿ ಮಲಾರ್, ಇಬ್ರಾಹೀಂ ಫೈಝಿ ಬದ್ಯಾರ್, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಹಾಜಿ ಪನೀರು, ಪರೀಕ್ಷಾ ಬೋರ್ಡ್ ಚೇರ್‌ಮನ್ ಆಗಿ ಅಬೂಬಕರ್ ದಾರಿಮಿ ಉಕ್ಕುಡ, ವೈಸ್‌ಚೇರ್‌ಮನ್‌ಗಳಳಾಗಿ ಹನೀಫ್ ದಾರಿಮಿ ಕಿನ್ಯ, ಇಸ್ಹಾಖ್ ಫೈಝಿ ಜಲಾಲ್‌ಬಾಗ್, ಎಸ್‌ಬಿವಿ ಚೇರ್‌ಮನ್‌ಆಗಿ ಹೈದರ್ ಅಲಿ ಮಿಸ್ಬಾಹಿ ಅರ್ಕನಾ, ಕನ್ವೀನರ್‌ಆಗಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ದೇರಳಕಟ್ಟೆ, ಕಣ್ಣಿಯತ್ ಉಸ್ತಾದ್ ರಿಲೀಫ್ ಸೆಂಟರ್ ಚೇರ್‌ಮನ್‌ಆಗಿ ಯಾಸಿರ್ ಅರಾಫತ್ ಕೌಸರಿ ಪನೀರು, ಕನ್ವೀನರ್‌ಆಗಿ ಅಬ್ದುರ್ರಶೀದ್ ಯಮಾನಿ ಪರೇಕ್ಕಳ, ಕುರುನ್ನುಗಳ್ ಬಾಲ ಮಾಸಿಕ ವಿತರಕರಾಗಿ ಇಕ್ಬಾಲ್ ಮುಸ್ಲಿಯಾರ್ ಕಿನ್ಯ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ ಗ್ರಾಮಚಾವಡಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News