×
Ad

ನೀಲಾವರ ವಿಶೇಷ ಮಕ್ಕಳ ಶಾಲೆಗೆ ಸವಲತ್ತುಗಳ ಕೊಡುಗೆ

Update: 2018-07-31 18:38 IST

ಉಡುಪಿ, ಜು.31: ನಾವು ಬದುಕಿ ಇನ್ನೊಬ್ಬರನ್ನು ಬದುಕಿಸುವ ಮೂಲಕ ಸಮಾಜದಲ್ಲಿ ದುಖಿಃತರ ಕಷ್ಟಗಳಿಗೆ ಸ್ಪಂದಿಸುವುದು ನಿಜವಾದ ಬದುಕು ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರೋಟರಿ ಉಡುಪಿ ವತಿಯಿಂದ ಗ್ಲೋಬಲ್ ಗ್ರ್ಯಾಂಟ್ ಮೂಲಕ ಸೋಮ ವಾರ ನಡೆದ ನೀಲಾವರದ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಸೌಲಭ್ಯಗಳ ವಿತರಣಾ ಸಮಾರಂದಲ್ಲಿ ಅವರು ಮಾತನಾಡುತಿದ್ದರು.

ಶಾಲೆಗೆ ಸುಮಾರು 28.23ಲಕ್ಷ ರೂ.ಮೌಲ್ಯದ ಎರಡು ತರಗತಿ ಕೋಣೆಗಳು ಹಾಗೂ ಕಛೇರಿಯ ಪೀಠೋಪಕರಣಗಳು, ನಾಲ್ಕು ಕಂಪ್ಯೂಟರ್‌ಗಳು, ಶುದ್ಧ ಕುಡಿಯುವ ನೀರಿನ ಘಟಕ, ಫಿಸಿಯೋಥೆರಪಿ ಉಪಕರಣಗಳು, ದೃಶ್ಯ ಮತ್ತು ಶ್ರಾವ್ಯ ಉಪಕರಣಗಳು, ಎರಡು ಶಾಲಾ ವಾಹನಗಳನ್ನು ರೋಟರಿ ಗ್ಲೋಬಲ್ ಗ್ರ್ಯಾಂಟ್ ಯೋಜನೆ ಯಡಿಯಲ್ಲಿ ಅಮೇರಿಕಾದ ರೋಟರಿ ಕ್ಲಬ್ ಸೆಂಟ್ರಲ್ ಚೆಸ್ಟರ್ ಕೌಂಟಿ, ರೋಟರಿ ಜಿಲ್ಲೆ 7450, ದಿ ರೋಟರಿ ಫೌಂಡೇಶನ್ ಹಾಗೂ ರೋಟರಿ ಜಿಲ್ಲೆ 3182 ಜೊತೆ ಸೇರಿ ನೀಡಲಾಯಿತು.

ಒಟ್ಟು ಯೋಜನೆಯ ಶಿಲಾಫಲಕವನ್ನು ಅಮೆರಿಕದ ರೋಟರಿ ಚೆಸ್ಟರ್ ಕಂಟ್ರಿಯ ವಸಂತ ಪ್ರಭು ಅನಾವರಣೆಗೊಳಿಸಿದರು. ಈ ಸಂದರ್ಭದಲ್ಲಿ ವಾಹನಗಳ ಕೀಲಿ ಕೈ, ದೃಶ್ಯ ಶ್ರವಣ ವಿಭಾಗ ಉದ್ಘಾಟನೆ ಹಾಗೂ ಫಿಸಿಯೋ ಥೆರೆಪಿ ವಿಭಾಗದ ಉದ್ಘಾಟನೆಯನ್ನು ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ, ನಿಕಟಪೂರ್ವ ಜಿಲ್ಲಾ ಗವರ್ನರ್ ಜಿ.ಎನ್.ಪ್ರಕಾಶ್ ಹಾಗೂ ತರಗತಿ ಕೋಣೆ, ಕಛೇರಿಯ ಪೀಠೋಪಕರಣಗಳ ವಿಭಾಗದ ಉದ್ಘಾಟನೆಯನ್ನು ರೋಟರಿ ಫೌಂಡೇಶನ್ ಜಿಲ್ಲಾ ಸಭಾಪತಿ ಸದಾನಂದ ಛಾತ್ರ ನೆರವೇರಿಸಿದರು. ಜಿಲ್ಲಾ ಗ್ರ್ಯಾಂಟ್ ಉಪಸಮಿತಿ ಸಭಾಪತಿ ಎಚ್.ಎನ್.ಎಸ್.ರಾವ್, ಸಹಾಯಕ ಗವರ್ನರ್ ಡಾ.ಗಣೇಶ್, ರಾಜಾರಾಮ ಭಟ್ ಉಪಸ್ಥಿತರಿದ್ದರು.

ರೋಟರಿ ಉಡುಪಿ ಅಧ್ಯಕ್ಷ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಹಾಯಕ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜನಾರ್ದನ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News