×
Ad

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ: ಡಾ.ನಿಕೇತನ

Update: 2018-07-31 18:42 IST

ಉಡುಪಿ, ಜು.31: ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮಾಹಿತಿ ಕೋಶ ಮತ್ತು ಐಕ್ಯುಎಸಿ ಕೋಶಗಳ ಜಂಟಿ ಸಹಯೋಗ ದಲ್ಲಿ ಸ್ಪರ್ಧಾತ್ಮಕ ಮತ್ತು ವೃತ್ತಿಪರ ಪರೀಕ್ಷೆಗಳನ್ನು ಎದುರಿಸಲು ಪೂರ್ವತಯಾರಿ ಬಗ್ಗೆ ಒಂದು ದಿನದ ಕಾರ್ಯಗಾರವನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ.ಸಂಧ್ಯಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿ ಗಳಿಗೆ ಐಬಿಪಿಎಸ್, ಬ್ಯಾಂಕ್ ಪರೀಕ್ಷೆ, ಎಫ್‌ಡಿಎ, ಎಸ್‌ಡಿಎ, ಸಿಎ, ಎಸಿಎಸ್ ಮುಂತಾದ ಪರೀಕ್ಷೆಗಳ ಪೂರ್ವತಯಾರಿ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ ಕಾರ್ಯಗಾರದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಮುಂದಿನ ಉಜ್ವಲ ವೃತ್ತಿ ಬದುಕನ್ನು ರೂಪಿಸಿಕೊಳ್ಳೇಕು ಎಂದು ಕಿವಿಮಾತು ಹೇಳಿದರು.

ವಾಣಿಜ್ಯಶಾಸ್ತ್ರ ವಿಬಾಗ ಮುಖ್ಯಸ್ಥ ಮತುತಿ ಉದ್ಯೋಗ ಮಾಹಿತಿಕೋಶದ ಸಂಚಾಲಕ ಪ್ರೊ.ದಿನೇಶ್ ಎಂ. ಇವರು ಸಂಪನ್ಮೂಲ ವ್ಯಕಿತಿಯನ್ನು ಪರಿಚಯಿಸಿ, ಉತತಿಮ ಅಂಕಗಳಿಕೆಯ ಜೊತೆಗೆ ಜೀವನ ಕೌಶಲ್ಯವನ್ನು ಕಲಿಯಬೇಕು. ಇಂದು ವಿದ್ಯಾರ್ಥಿಗಳಲ್ಲಿ ಸಂಪರ್ಕದ ಕೊರತೆ ಅಧಿಕವಾಗಿದ್ದು, ಕೆಲಸಕ್ಕೆ ಬೇಡಿಕೆ ಇರುವಂತೆ, ಕೆಲಸ ಮಾಡಬೇಕಾದವರ ಕೊರತೆಯೂ ಇದೆ. ಇವುಗಳ ಸಮರ್ಪಕ ನಿರ್ವಹಣೆ ಮಾಡಿದರೆ ಹೆಚ್ಚು ಹೆಚ್ಚು ಯುವಕರಿಗೆ ನೌಕರಿ ಕೊಡಿಸುವಲ್ಲಿ ಸಾಧ್ಯವಾಗುತತಿದೆ. ಆ ನಿಟ್ಟಿನಲ್ಲಿ ನಮ್ಮ ಕಾಲೇಜಿನ ವೃತಿತಿ ಮಾರ್ಗದರ್ಶನ ಮತುತಿ ಉದ್ಯೋಗ ಮಾಹಿತಿ ಘಟಕ ಕಾರ್ಯ ನಿರ್ವಹಿಸುತಿತಿದೆ ಎಂದರು.

ಪ್ರೊ.ಸುಜಯಾ ಕೆ.ಎಸ್. ಹಾಗೂ ಪ್ರೊ. ಸುಬಾಷ್ ಹೆಚ್.ಕೆ. ಉಪಸ್ಥಿತರಿ ದ್ದರು. ವಿದ್ಯಾರ್ಥಿ ಸಂಚಾಲಕ ದೀಪಕ್ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಧ್ಯಕ್ಷ ಹರ್ಷಿತ್ ವಂದಿಸಿದರು. ವಿದ್ಯಾರ್ಥಿನಿ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News