×
Ad

ಬಕ್ರೀದ್: ಕುರ್ಬಾನಿಗೆ ರಕ್ಷಣೆ ನೀಡಲು ಒತ್ತಾಯಿಸಿ ಮನವಿ

Update: 2018-07-31 18:48 IST

ಮಂಗಳೂರು, ಜು.31: ಬಕ್ರೀದ್‌ನ್ನು ಆಗಸ್ಟ್ ತಿಂಗಳಲ್ಲಿ ಆಚರಿಸಲಿದ್ದು, ಜಿಲ್ಲಾಡಳಿತವು ಜಾನುವಾರು ಸಾಗಾಟಗಾರರಿಗೆ ಪೂರ್ಣ ರಕ್ಷಣೆ ನೀಡಲು ಒತ್ತಾಯಿಸಿ ಮುಸ್ಲಿಂ ಲೀಗ್‌ನಿಂದ ಜಿಲ್ಲಾಧಿಕಾರಿ ಮೂಲಕ ಗೃಹಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮುಸ್ಲಿಮರಿಗೆ ಕುರ್ಬಾನಿ(ಜಾನುವಾರು ಬಲಿ) ಕೊಡುವುದು ಕಡ್ಡಾಯವಿದ್ದು, ಅದರ ಮಾಂಸವನ್ನು ಬಡವರಿಗೆ ದಾನ ಮಾಡುವ ರೂಢಿಯಿದೆ. ಬಕ್ರೀದ್ ಆಚರಣೆಯೊಂದಿಗೆ ನಾಲ್ಕು ದಿನಗಳ ಕಾಲ ಕುರ್ಬಾನಿ ಇರುತ್ತದೆ. ಈ ಸಂದರ್ಭ ನ್ಯಾಯಬದ್ಧವಾಗಿ ಸರಕಾರ ಮತ್ತು ಜಿಲ್ಲಾಡಳಿತ ರಕ್ಷಣೆ ನೀಡಬೇಕು. ಜಾನುವಾರು ಸಾಗಾಟಗಾರರನ್ನು ತಡೆಯೊಡ್ಡುವವರ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಲು ಮುಸ್ಲಿಂ ಲೀಗ್ ಒತ್ತಾಯಿಸಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಲೀಗ್ ಮಾಜಿ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯೀಲ್, ಜಿಲ್ಲಾ ಲೀಗ್‌ನ ಸದಸ್ಯ ಹಮೀದ್, ಎಂ.ಕೆ.ಅಶ್ರಫ್, ಹನೀಫ್, ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News