×
Ad

ಸಿಎ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಅಶ್ವಥ್‌ಗೆ ಸನ್ಮಾನ

Update: 2018-07-31 21:02 IST

ಉಡುಪಿ, ಜು.31: ಅಖಿಲ ಭಾರತ ಲೆಕ್ಕಪರಿಶೋಧಕರ ಸಂಸ್ಥೆ ನವದೆಹಲಿ ನಡೆಸಿದ 2018ನೇ ಸಾಲಿನ ಸಿಎ ಐಪಿಸಿ ಪರೀಕ್ಷೆಯಲ್ಲಿ ಅಶ್ವತ ಎ.ಕೋಟ್ಯಾನ್ 41ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.

ಉಡುಪಿ ಐಸಿಎಐ ಶಾಖೆಯಲ್ಲಿ ಅಧ್ಯಕ್ಷ ಸಿಎ ಕೆ.ಸುರೇಂದ್ರ ನಾಯಕ್ ಮತ್ತು ಮ್ಯಾನೆಜಿಂಗ್ ಕಮಿಟಿ ಮತ್ತು ಪ್ರಭಾಜಿತ್ ಆಂಡ್ ಕೋ ಪಾಲುದಾರ ಸಿಎ ಯು.ಬಿ.ಅಜಿತ್ ಕುಮಾರ ಮತ್ತು. ಸಿಎ ಜಯಲಕ್ಷ್ಮಿ ಕಾಮತ್ ಸಮ್ಮುಖದಲ್ಲಿ ಅಶ್ವತ ಎ.ಕೋಟ್ಯಾನ್ ಅವರನ್ನು ಸಮ್ಮಾನಿಸಲಾಯಿತು.

ಉಡುಪಿ ಐಸಿಎಐ ಶಾಖೆಯಲ್ಲಿ ಕೋಚಿಂಗ್ ಪಡೆದ ಇವರು ಮೂಡುಬೆಟ್ಟು ಅಶೋಕ ಕೋಟ್ಯಾನ್ ಮತ್ತು ಗಾಯತ್ರಿ ಕೋಟ್ಯಾನ್ ದಂಪತಿ ಪುತ್ರ. ಇವರು ಉಡುಪಿಯ ಪ್ರಭಾಜಿತ್ ಆಂಡ್ ಕೋನಲ್ಲಿ ಸಿಎ ಯು.ಬಿ.ಅಜಿತ ಕುಮಾರ್ ಮಾರ್ಗದರ್ಶನದಲ್ಲಿ ಆರ್ಟಿಲ್‌ಶಿಪ್ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News