×
Ad

ಮುದರಂಗಡಿ: 1.29ಕೋ.ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ

Update: 2018-07-31 21:03 IST

ಕಾಪು, ಜು.31: ಅದಾನಿ ಫೌಂಡೇಷನ್ ಸಿಎಸ್‌ಆರ್ ಯೋಜನೆಯಲ್ಲಿ ಮುದರಂಗಡಿ ಗ್ರಾಮದಲ್ಲಿ 1.29 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಗೊಳಿಸಿರುವ ಸಾಂತೂರು ಭರಣಿ ರಸ್ತೆ, ಜಂಗಮ ಮಠದ ರಸ್ತೆ, ಕುಂಜಿಬೆಟ್ಟು ರಸ್ತೆ ಮತ್ತು ವಿಠ್ಠಲ ಮೊಲಿ ರ್ತೆಗಳ ಉದ್ಘಾಟನೆ ಇಂದು ನಡೆಯಿತು.

ಅದಾನಿ ಸಮೂಹದ ಕಾರ್ಯನಿರ್ವಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ ರಸ್ತೆಗಳನ್ನು ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಂತಿ ಪೂಜಾರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಸದಸ್ಯರಾದ ಶೋಭಾ ೆರ್ನಾಂಡೀಸ್, ವಿನೋದಾ ಪೂಜಾರಿ, ಲೂಸಿ ಮಥಾಯಿಸ್, ಶಿವರಾಂ ಭಂಡಾರಿ, ಜೆಸ್ಸಿಲ್ಲಾ ಡಿಸೋಜ, ಸುಕುಮಾರ್ ಶೆಟ್ಟಿ, ಪಂಚಾಯತ್‌ನ ಲೆಕ್ಕ ಸಹಾಯಕ ಶಿವರಾಂ, ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್. ಜೇರೆ, ಅದಾನಿ ೌಂಡೇಷನ್‌ನ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News