×
Ad

ಬುಲ್‌ಟ್ರಾಲ್, ಬೆಳಕು ಮೀನುಗಾರಿಕೆಗೆ ನಿಷೇಧ

Update: 2018-07-31 21:07 IST

ಉಡುಪಿ, ಜು.31: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮುದ್ರದಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ, ಬೆಳಕು ಮೀನುಗಾರಿಕೆ, ಅವೈಜ್ಞಾನಿಕವಾಗಿ ನಡೆಸುವ ಪಚ್ಚಿಲೆ ಮೀನುಗಾರಿಕೆ ಅಲ್ಲದೇ ಚೌರಿ ಮತ್ತು ಪ್ಲಾಸ್ಟಿಕ್ ಬಳಸಿ ಅನಧಿಕೃತವಾಗಿ ಕಪ್ಪೆ ಬಂಡಾಸು ಮೀನು ಹಿಡಿಯುುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಆದ್ದರಿಂದ ಎಲ್ಲಾ ಮೀನುಗಾರಿಕಾ ದೋಣಿಗಳ ಮಾಲೀಕರು ಈ ಆದೇಶ ಗಳನ್ನು ಪಾಲಿಸಿ ಸಹಕರಿಸುವಂತೆ ಕೋರಲಾಗಿದೆ. ನಿಷೇಧದ ಉಲ್ಲಂಘನೆ ಮಾಡಿದ ದೋಣಿಗಳ ಮಾಲಕರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಮೀನುಗಾರಿಕಾ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಮೀನು ಮರಿಗಳು: ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಉತ್ತಮ ಜಾತಿಯ ಬಿತ್ತನೆ ಗಾತ್ರದ ಮೀನು ಮರಿಗಳನ್ನು ಕಾರ್ಕಳ ತಾಲೂಕಿನ ಮೀನುಗಾರಿಕಾ ಇಲಾಖೆಯ ಮೀನು ಮರಿ ಪಾಲನಾ ಕೇಂದ್ರದಲ್ಲಿ ಪಾಲನೆ ಮಾಡಲಾಗುತ್ತಿದೆ.

ಆಸಕ್ತ ಮೀನು ಕೃಷಿಕರು ಮೀನುಗಾರಿಕಾ ಸಹಾಯಕ ನಿರ್ದೇಶಕರು (ಶ್ರೇಣಿ-2), ಕಾರ್ಕಳ (ದೂರವಾಣಿ: 08258-233093,9986775973) ಇವರನ್ನು ಸಂಪರ್ಕಿಸಿ, ನಿಗದಿತ ದರವನ್ನು ಪಾವತಿಸಿ ಮೀನು ಮರಿಗಳನ್ನು ಪಡೆದುಕೊಳ್ಳುವಂತೆ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News