×
Ad

ಗುಣಾತ್ಮಕ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಆದ್ಯತೆಯಾಗಬೇಕು: ಲಾಲಾಜಿ ಆರ್. ಮೆಂಡನ್

Update: 2018-07-31 21:11 IST

ಉಡುಪಿ, ಜು.31:ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ ಕೊಳ್ಳುವ ನಿಟ್ಟನಲ್ಲಿ ಗುಣಾತ್ಮಕ ಶಿಕ್ಷಣ ಪಡೆಯುವುದನ್ನು ತಮ್ಮ ಆದ್ಯತೆಯಾಗಿಸಿ ಕೊಳ್ಳಬೇಕು. ಪಠ್ಯ ವಿಷಯಗಳಲ್ಲಿ ಉತ್ತಮ ಸಾಧನೆ ತೋರುವುದರ ಜೊತೆಗೆ ಪ್ರಜ್ಞಾವಂತಿಕೆ, ನಾಯಕತ್ವ ಗುಣ ಮೊದಲಾದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಹಿರಿಯಡಕದ ಗಣೇಶ ಕಲಾ ಮಂದಿರದಲ್ಲಿ ನಡೆದ ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2018-19ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಪ್ ಮ್ಯಾನೇಜ್‌ಮೆಂಟ್‌ನ ಸ್ಥಾಪಕ ನಿರ್ದೇಶಕ ಎಂ.ಆರ್. ಹೆಗ್ಡೆ ತಮ್ಮ ದಿಕ್ಸೂಚಿ ಭಾಷಣದಲ್ಲಿ ವಿದ್ಯಾರ್ಥಿ ಸಮೂಹವು ಸಮಾಜದ ಆಸ್ತಿಯಾಗಿದ್ದು, ಇಂದಿನ ಸಮಾಜಕ್ಕಾಗಿ ಕೌಶಲ್ಯಯುತವಾದ ಪ್ರಜ್ಞಾವಂತ ಯುವ ಸಮುದಾಯವನ್ನು ನಿರ್ಮಿಸುವ ಹೊಣೆ ಉಪನ್ಯಾಸಕರ ಮೇಲಿದೆ ಎಂದರು.

ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಲಾಲಾಜಿ ಆರ್. ಮೆಂಡನ್, ಎಂ.ಆರ್. ಹೆಗ್ಡೆ ಹಾಗೂ ಶಿಕ್ಷಣ ತಜ್ಞ ಡಾ.ಎನ್.ಎಸ್. ಶೆಟ್ಟಿ ಇವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಮಾಲತಿ ಬಿ.ಆಚಾರ್ಯ, ಗ್ರಾಪಂ ಸದಸ್ಯೆ ಸರೋಜ ನಾಯಕ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ.ಎನ್. ಎಸ್.ಶೆಟ್ಟಿ, ಮಾಧವ ನಾಯಕ್, ದಯಾನಂದ ಮಲ್ಯ, ಪೂರ್ಣಿಮಾ ನಾಯಕ್, ವಸಂತ ಶೆಟ್ಟಿ, ಸಂಧ್ಯಾಕಾಮತ್, ಸತ್ಯಾನಂದ ನಾಯಕ್, ಉಮೇಶ ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಸುಜಯಾ ಕೆ.ಎಸ್., ವಿದ್ಯಾರ್ಥಿ ನಾಯಕರಾದ ಹರ್ಷಿತ್ ಶೆಟ್ಟಿ, ದೀಪಕ್ ಶೆಟ್ಟಿ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುಜಯಾ ಕೆ.ಎಸ್. ಸ್ವಾಗತಿಸಿದರೆ, ಪ್ರಾಂಶುಪಾಲೆ ಡಾ.ನಿಕೇತನ ಪ್ರಾಸ್ತಾವಿಕ ಮಾತನಾಡಿದರು. ಸುಮನಾ ಬಿ.ಕಾರ್ಯಕ್ರಮ ನಿರೂಪಿಸಿ ದೀಪಕ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News