ಗುರು ಭಟ್ ಕೊಲೆ ಪ್ರಕರಣ: ಆರೋಪಿಗಳ ವಿಚಾರಣೆ
Update: 2018-07-31 22:26 IST
ಮಣಿಪಾಲ, ಜು.31: ಮಣಿಪಾಲ-ಪೆರಂಪಳ್ಳಿ ರಸ್ತೆಯ ಸೆವೆನ್ತ್ ಹೆವೆನ್ ಹೊಟೇಲ್ ಕಟ್ಟಡದಲ್ಲಿರುವ ಇಸ್ಪೀಟ್ ಕ್ಲಬ್ನಲ್ಲಿ ಜು.29ರಂದು ನಡೆದ ಗುರು ಪ್ರಸಾದ್ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳಾದ ರಂಜಿತ್ ಪಿಂಟೋ, ಸುಜಿತ್ ಪಿಂಟೋ, ಪ್ರದೀಪ್ ಪೂಜಾರಿ, ರಾಜೇಶ್ ಪೂಜಾರಿಯನ್ನು ತನಿಖಾಧಿಕಾರಿ ಮಣಿಪಾಲ ಪೊಲೀಸ್ ನಿರೀಕ್ಷಕ ಸುದರ್ಶನ್ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜು ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳು ಕೊಲೆಗೆ ಬಳಸಿದ ಚೂರಿ ಸೇರಿದಂತೆ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಲವು ಸಾಕ್ಷ ಗಳನ್ನು ಸಂಗ್ರಹಿಸಿದ್ದಾರೆ. ಮೂರು ದಿನಗಳ ಪೊಲೀಸ್ ಕಸ್ಟಡಿಯ ಬಳಿಕ ನಾಲ್ವರು ಆರೋಪಿಗಳನ್ನು ಪೊಲೀಸರು ಆ.2ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.