ಯೆನೆಪೊಯ ವಿವಿ: ಹಳೇ ವಿದ್ಯಾರ್ಥಿ ಅಸೋಸಿಯೇಶನ್‌ನ ವೆಬ್‌ಸೈಟ್, ಮೊಬೈಲ್ ಆ್ಯಪ್ ಚಾಲನೆ

Update: 2018-07-31 17:26 GMT

ಉಳ್ಳಾಲ, ಜು. 31: ಆಧುನಿಕ ತಂತ್ರಜ್ಞಾನಗಳಾದ ವೆಬ್‌ಸೈಟ್ ಬಳಕೆಯಿಂದ ಕಾಲೇಜಿನೊಂದಿಗೆ ಹಳೆ ವಿದ್ಯಾರ್ಥಿಗಳ ಸಂಬಂಧ ಇನ್ನಷ್ಟು ನಿಕಟವಾಗಿದ್ದು, ಹಳೆ ವಿದ್ಯಾರ್ಥಿ ಸಂಘವೂ ಇನ್ನಷ್ಟು ಸದೃಢವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಯೆನೆಪೊಯ ವಿಶ್ವವಿದ್ಯಾಲಯದ ಕುಲಪತಿ ಯೇನೆಪೊಯ ಅಬ್ದುಲ್ಲ ಕುಂಞ ಅಭಿಪ್ರಾಯಪಟ್ಟರು.

ಅವರು ಯೆನೆಪೊಯ ದಂತ ಕಾಲೇಜಿನ ಅಡಿಟೋರಿಯಂನಲ್ಲಿ ಯೆನೆಪೊಯ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿ ಅಸೋಸಿಯೇಶನ್‌ನ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಮತ್ತು ಮಲೇಷಿಯಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದು ವೃತ್ತಿ ಜೀವನದಲ್ಲಿದ್ದಾರೆ. ಅಂತಹ ಸಂದರ್ಭದಲ್ಲಿ ಕಾಲೇಜಿನ ವಿಚಾರಗಳ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮದ ಮಾಹಿತಿಯನ್ನು ತಿಳಿಯುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗಳನ್ನು ಮೂಡಿಸುವಲ್ಲಿ ಇಂತಹ ವೆಬ್‌ಸೈಟ್‌ಗಳು ಸಹಕಾರಿಯಾಗಿದ್ದು, ಹೆಚ್ಚಿನ ಹಳೆ ವಿದ್ಯಾರ್ಥಿಗಳು ಈ ವೆಬ್‌ಸೈಟ್ ಮೂಲಕ ಸಂಪರ್ಕವನ್ನು ಪಡೆದುಕೊಳ್ಳಬಹುದು ಎಂದರು.

ಯೆನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ ಎಂ. ವಿಜಯಕುಮಾರ್ ಮಾತನಾಡಿ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳನ್ನು ಸಂಘಟಿಸುವ ಕಾರ್ಯ ಮಹತ್ವದ್ದು, ಹಳೆ ವಿದ್ಯಾರ್ಥಿ ಸಂಘಗಳ ಮೂಲಕ ನಾಯಕತ್ವವನ್ನು ವಹಿಸಿಕೊಂಡು ತಾವು ಕಲಿತ ಶಿಕ್ಷಣ ಸಂಸ್ಥೆಯ ಹೆಸರನ್ನು ಚಿರಸ್ಥಾಯಿಯಾಗಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ ಎಂದರು.

ಕಾರ್ಯಕ್ರಮದಲ್ಲಿ ಯೆನೆಪೊಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ಜಿ. ಶ್ರೀಕುಮಾರ್ ಮೆನನ್, ಯೇನೆಪೊಯ ಡೆಂಟಲ್ ಕಾಲೇಜಿನ ಪ್ರಾಶುಂಪಾಲ ಡಾ ಬಿ.ಹೆಚ್.ಶ್ರೀಪತಿ ರಾವ್, ಯೇನೆಪೊಯ ಮೆಡಿಕಲ್ ಕಾಲೇಜಿನ ಪ್ರಾಶುಂಪಾಲ ಡಾ ಮೂಸಬ್ಬ, ಫಿಸಿಯೋಥೆರಪಿ ಕಾಲೇಜಿನ ಪ್ರಾಶುಂಪಾಲ ಡಾ ಪದ್ಮ ಕುಮಾರ್, ನರ್ಸಿಂಗ್ ಕಾಲೇಜಿನ ಪ್ರಾಶುಂಪಾಲೆ ಡಾ ಲೀನಾ ಕೆ.ಸಿ, ಐಎಇಯ ಕಾರ್ಯದರ್ಶಿ ಡಾ ಅಖ್ತರ್ ಹುಸೈನ್, ಕಣ್ಣೂರು ಮತ್ತು ಕ್ಯಾಲಿಕಟ್‌ನ ಮಾಜಿ ಕುಲಪತಿ ಡಾ ಅಬ್ದುಲ್ಲ ರಹಿಮಾನ್ ಉಪಸ್ಥಿತರಿದ್ದರು.

ಯೆನೆಪೊಯ ವಿಶ್ವವಿದ್ಯಾಲಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ ಶಾಹುಲ್ ಹಮೀದ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ ಸಜ್ಜದ್ ಎ.ಆರ್. ವಂದಿಸಿದರು. ಖಜಾಂಜಿ ಡಾ ಇಮ್ರಾನ್ ಪಾಶಾ ವರದಿ ವಾಚಿಸಿದರು. ಬೆನಝೀರ್, ನಿಗತ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News