ಭಟ್ಕಳ: ಅಕ್ರಮ ಜಾನುವಾರು ಸಾಗಾಟ; ಇಬ್ಬರ ಬಂಧನ

Update: 2018-07-31 18:11 GMT

ಭಟ್ಕಳ, ಜು. 31: ಅಕ್ರಮವಾಗಿ ದನಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಗ್ರಾಮೀಣ ಪೊಲೀಸರು ಅವರ ಬೆನ್ನತ್ತಿ ಇಲ್ಲಿನ ಗುಳ್ಮೆ ಕ್ರಾಸ್ ಬಳಿ ವಾಹನ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ ಇಲ್ಲಿನ ಮುಗಳಿಹೊಂಡದ ಇರ್ಫಾನ್ ಸನವುಲ್ಲಾ ಭಾಷಾ ಸಾಬ್ (22) ವಾಹನ ಚಾಲಕ ಹಾಗೂ ಮುಗ್ದುಮ್ ಕಾಲೋನಿಯ ಇರ್ಫಾನ್ ಭಾಷಾ ಖಾನ್ (34) ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು 20 ಸಾವಿರ ರೂ. ಮೌಲ್ಯದ 2 ಕೋಣ, 10 ಸಾವಿರ ಮೌಲ್ಯದ 1 ಎತ್ತು ಹಾಗೂ 3 ಸಾವಿರ ಮೌಲ್ಯ ದನ ಕರು ಸಾಗುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News