ಮುಲ್ಕಿ ಶಿಮಂತೂರು ದೇವಳದಲ್ಲಿ ಶೀರೂರು ಶ್ರೀಗಳ ರಹಸ್ಯ ಆರಾಧನೆ

Update: 2018-07-31 18:19 GMT

ಮುಲ್ಕಿ, ಜು. 31: ಕಳೆದ ದಿನಗಳ ಹಿಂದೆ ಉಡುಪಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಶೀರೂರು ಶ್ರೀಗಳ ಆರಾಧನೆಯನ್ನು ಮುಲ್ಕಿ ಸಮೀಪದ ಶಿಮಂತೂರು ಶ್ರೀ ಆದಿಜನರ್ಧನ ದೇವಸ್ಥಾನದಲ್ಲಿ ನಡೆದಿದ್ದು ಉಡುಪಿ, ಮುಲ್ಕಿಯ ಪುನರೂರು ಸಮೀಪದ ಅನೇಕ ಸಂಬಂದಿಕರು ನೆರೆವೇರಿಸಿದ ಬಗ್ಗೆ ವರದಿಯಾಗಿದೆ.

ಉಡುಪಿಯ ಶೀರೂರು ಮಠದ ಲಕ್ಷ್ಮೀವರ ಸ್ವಾಮೀಜಿಯವರ ಉತ್ತರ ಕ್ರಿಯೆಯನ್ನು ಮಂಗಳವಾರ ಶೀರೂರು ಮಠದಲ್ಲಿ ಮಾಡಲು ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಅವರ ಸಂಬಂಧಿಕರು ಶೀರೂರು ಮಠದ ಪೂರ್ವಾಶ್ರಮ ಕುಲದೇವರಾದ ಶಿಮಂತೂರು ಶ್ರೀ ಆದಿಜನಾರ್ಧನ ದೇವಸ್ಥಾನದಲ್ಲಿ ರಹಸ್ಯವಾಗಿ ಆರಾಧಿಸಿದ್ದಾರೆ. ಬೆಳಗ್ಗಿನಿಂದಲೇ ಸುಮಾರು 100 ಮಂದಿ ಭಕ್ತರನ್ನು ಸರಿಸಿಕೊಂಡು ಶೀರೂರು ಸ್ವಾಮೀಜಿಯನ್ನು ಆರಾಧಿಸಿದ್ದು, ಬಂದವರಿಗೆ ಶ್ರೀ ಕೃಷ್ಣನ ಚಿತ್ರ ಹಾಗೂ ಪೂರ್ವಶ್ರಮದ ಸಹೋದರ ಲಾತವ್ಯ ಆಚಾರ್ಯ ಬರೆದಿರುವ ಪುಸ್ತಕವನ್ನು ವಿತರಿಸಲಾಯಿತು ಎಂದು ದೆವಳದ ಮೂಲಗಳು ತಿಳಿಸಿದೆ.

ದೇವಳದಲ್ಲಿ ರಹಸ್ಯವಾಗಿ ಪೊಲೀಸರ ಅನುಮತಿಯನ್ನು ಪಡೆಯದೆ ಆರಾಧನೆಯನ್ನು ನಡೆಸುತ್ತಿರುವುದು ಮುಲ್ಕಿ ಪೊಲೀಸರಿಗೆ ತಿಳಿಸಿದ್ದು ಕೂಡಲೇ ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀನೆ ನಡೆಸಿ ಹೋಗಿದ್ದರು. ಉಡುಪಿಯ ಮುಚ್ಚಿಂತಾಯ ಎಂಬವರ ನೇತೃತ್ವದಲ್ಲಿ ಕಾರ್ಯಕ್ರಮ ನಿರಾತಂಕವಾಗಿ ನಡೆದಿದೆ ಎಂದು ತಿಳಿದು ಬಂದಿದೆ.

ಶಿಮಂತೂರು ದೇಗುಲದಲ್ಲಿ ನಡೆದ ಶೀರೂರು ಶ್ರೀಗಳ ಆರಾಧನೆಯನ್ನು ಎಷ್ಟು ಗೌಪ್ಯವಾಗಿ ಇಡಲಾಗಿತ್ತು ಎಂದರೆ ದೇವಳದ ಪರಿಸರದಲ್ಲಿರುವವರಿಗೂ ದೇವಳದಲ್ಲಿ ಏನು ರ್ಯಕ್ರಮ ನಡೆಯುತ್ತದೆ ಎಂದು ಗೊತ್ತಿರಲಿಲ್ಲ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News