ವಿದೇಶಕ್ಕೆ ತೆರಳಲು ಶಶಿ ತರೂರ್‌ಗೆ ನ್ಯಾಯಾಲಯ ಅನುಮತಿ

Update: 2018-08-01 14:13 GMT

ಹೊಸದಿಲ್ಲಿ, ಆ. 31: ಸುನಂದಾ ಪುಷ್ಕರ್ ಸಾವು ಪ್ರಕರಣದ ಆರೋಪಿಯಾಗಿರುವ ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ಗೆ ಆಗಸ್ಟ್ 10ರಿಂದ ಕೆಲವು ದಿನಗಳ ಕಾಲ ವಿದೇಶಕ್ಕೆ ತೆರಳಲು ದಿಲ್ಲಿ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ. ದೇಶ ಬಿಡುವ ಮೊದಲು ಅವರು 2 ಲಕ್ಷ ರೂಪಾಯಿ ಠೇವಣಿ ಇರಿಸಬೇಕಾಗಿದೆ ಹಾಗೂ ಈ ಠೇವಣಿಯನ್ನು ಹಿಂದೆ ನೀಡಲಾಗುತ್ತದೆ. ಕಾಂಗ್ರೆಸ್ ಸಂಸದರಾಗಿರುವ ತರೂರ್ ಅವರು ವಿದೇಶಕ್ಕೆ ತೆರಳಲು ಅನುಮತಿಗಾಗಿ ದಿಲ್ಲಿ ಪಾಟಿಯಾಲ ನ್ಯಾಯಾ ಲಯದಲ್ಲಿ ಮನವಿ ಸಲ್ಲಿಸಿದ್ದರು.

ಕಳೆದ ತಿಂಗಳು ನ್ಯಾಯಾಲಯ ತರೂರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ನಿರೀಕ್ಷಣಾ ಜಾಮೀನು ಶರತ್ತಿನ ಪ್ರಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡದೆ ವಿದೇಶಕ್ಕೆ ತೆರಳುವುದು ಸಾಧ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮನವಿ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News