ವಿಜಯ್ ಮಲ್ಯ ಗಡಿಪಾರು ಪ್ರಕರಣ: ಭಾರತದ ಗಡಿಪಾರು ಒಪ್ಪಂದ ದುರ್ಬಲ

Update: 2018-08-01 14:38 GMT

ಹೊಸದಿಲ್ಲಿ, ಆ. 1: ಭಾರತ ಸಲ್ಲಿಸಿದ ಗಡಿಪಾರು ಮನವಿಗೆ ಸಂಬಂಧಿಸಿ ಮದ್ಯದ ಉದ್ಯಮಿ ವಿಜಯ್ ಮಲ್ಯ ಅವರನ್ನು ಸ್ಟಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ ಹಾಗೂ ಅನಂತರ ಬಿಡುಗಡೆಗೊಳಿಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ 1993ರಲ್ಲಿ ಗಡಿಪಾರು ಒಪ್ಪಂದಕ್ಕೆ ಸಹಿ ಹಾಕಿತ್ತು. ಅನಂತರ ಭಾರತ 131 ಆರೋಪಿಗಳ ಗಡಿಪಾರಿಗೆ ಮನವಿ ಮಾಡಿತ್ತು.

 ಆದರೆ, ದೇಶ ಬಿಟ್ಟು ಪರಾರಿಯಾಗಿರುವ ಭಾರತದ ಪ್ರಜೆ, ಕೊಲೆ ಆರೋಪಿ ಸಮೀರ್‌ಭಾ ವಿನುಭಾ ಪಟೇಲ್ ಅವರನ್ನು ಮಾತ್ರ ಹಿಂದೆ ಪಡೆಯಲು ಸಫಲವಾಗಿತ್ತು. ಎರಡೂ ದೇಶಗಳಲ್ಲಿ ಅಪರಾಧ ಎಸಗಿದ್ದರೆ ಮಾತ್ರ ಗಡಿಪಾರು ಸಾಧ್ಯ. ಈ ಹಿಂದೆ ನದೀಮ್ ಶ್ರವಣ್ ಗಡಿಪಾರು ಪ್ರಕರಣದಲ್ಲಿ ಇಂಗ್ಲೆಂಡ್‌ನ ನ್ಯಾಯಾಲಯದಿಂದ ತಮಗೆ ಅನಕೂಲ ತೀರ್ಪು ಪಡೆಯಲು ಭಾರತ ಸರಕಾರ ವಿಫಲವಾಗಿತ್ತು. ಗುಲ್ಶನ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಫಿಯನ್ನು ಕಸ್ಟಡಿಗೆ ಒಪ್ಪಿಸುವಂತೆ ಭಾರತ ಕೋರಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News