ನ್ಯಾಯಾಂಗದಲ್ಲಿ 5 ಸಾವಿರ ಹುದ್ದೆ ಖಾಲಿ: ಕೇಂದ್ರ

Update: 2018-08-01 14:40 GMT

ಹೊಸದಿಲ್ಲಿ, ಆ. 1: ದೇಶಾದ್ಯಂತ ಕೆಳ ನ್ಯಾಯಾಲಯದಲ್ಲಿ ಸುಮಾರು 5000ಕ್ಕೂ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

 ಅಧೀನ ನ್ಯಾಯಾಲಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ನ್ಯಾಯೋಚಿತ ಪ್ರತಿನಿಧೀಕರಣಕ್ಕೆ ಈ ಖಾಲಿ ಹುದ್ದೆಗಳನ್ನು ತುಂಬಿಸಲು ಕೇಂದ್ರ ಸರಕಾರ ಪ್ರಾಮುಖ್ಯತೆ ನೀಡಲಿದೆ ಎಂದು ಪ್ರಸಾದ್ ಹೇಳಿದರು. ಪ್ರಸ್ತುತ ಅಧೀನ ನ್ಯಾಯಾಲಯಗಳಲ್ಲಿ 5,000ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಆದರೆ, ಈ ಹಿಂದಿನ ಸರಕಾರ ಏನೂ ಮಾಡಿಲ್ಲ. ಆದರೆ, ನಾವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ನ್ಯಾಯೋಚಿತ ಪ್ರತಿನಿಧೀಕರಣಕ್ಕೆ ಈ ಖಾಲಿ ಹುದ್ದೆಗಳನ್ನು ತುಂಬಿಸಲು ಪ್ರಾಮುಖ್ಯತೆ ನೀಡಲಿದ್ದೇವೆ ಎಂದು ಅವರು ಪ್ರಶ್ನೋತ್ತರ ವೇಳೆಯ ಸಂದರ್ಭ ಹೇಳಿದರು.

 ದುರ್ಬಲ ವರ್ಗದವರು ಮೊದಲು ಕೆಳ ನ್ಯಾಯಾಲಯದಲ್ಲಿ ಅನುಭವ ಪಡೆಯಬೇಕು. ಅನಂತರ ಅವರು ಕ್ರಮೇಣ ಮೇಲಿನ ನ್ಯಾಯಾಲಯದಲ್ಲಿ ಸ್ಥಾನ ಪಡೆದುಕೊಳ್ಳಲು ಅರ್ಹರಾಗುತ್ತಾರೆ ಎಂಬುದು ನರೇಂದ್ರ ಮೋದಿ ಸರಕಾರದ ಬಯಕೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News