×
Ad

ಆಸ್ಪತ್ರೆಯಿಂದ ಶರೀಫ್ ಮತ್ತೆ ಜೈಲಿಗೆ

Update: 2018-08-01 20:16 IST

ಇಸ್ಲಾಮಾಬಾದ್, ಆ. 1: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಆರೋಗ್ಯ ಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಜೈಲಿಗೆ ವರ್ಗಾಯಿಸಲಾಗಿದೆ.

ರವಿವಾರ ರಾತ್ರಿ ಜೈಲಿನಲ್ಲಿ ಹೃದಯದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಆರೋಗ್ಯ ಕುಸಿದ ಬಳಿಕ ಶರೀಫ್‌ರನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೃದಯ ಕೇಂದ್ರಕ್ಕೆ ಸೇರಿಸಲಾಗಿತ್ತು.

68 ವರ್ಷದ ಶರೀಫ್‌ರ ಆರೋಗ್ಯ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಜೈಲಿಗೆ ವರ್ಗಾಯಿಸಲು ವೈದ್ಯರು ನಿರ್ಧರಿಸಿದರು ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News