×
Ad

ಉಚ್ಚಿಲ ಗ್ರಾಪಂ ಸಭೆ ಎರಡನೇ ಭಾರಿಯೂ ರದ್ದು

Update: 2018-08-01 20:44 IST

ಪಡುಬಿದ್ರೆ, ಆ. 1: ಕಳೆದ ವಾರ ಕೋರಂ ಇಲ್ಲದೆ ಮುಂದೂಡಲ್ಪಟ್ಟ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಎರಡನೇ ಭಾರಿಯೂ ರದ್ದಾಗಿದೆ.

ಗ್ರಾಮ ಪಂಚಾಯ್ತಿನಲ್ಲಿ ಅಧ್ಯಕ್ಷರ ಸಹಿತ ಬಿಜೆಪಿ ಬೆಂಬಲಿತ 14 ಹಾಗೂ ಕಾಂಗ್ರೆಸ್ ಬೆಂಬಲಿತ 6 ಹಾಗೂ ಓರ್ವ ಎಸ್‌ಡಿಪಿಐ ಬೆಂಬಲಿತ ಸದಸ್ಯರಿದ್ದಾರೆ. ಬಿಜೆಪಿ ಬೆಂಬಲಿತ ಅಧ್ಯಕ್ಷೆ ನಾಗರತ್ನ ಎ ಕರ್ಕೇರ ಸಹಿತ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬುಧವಾರ ಮಧ್ಯಾಹ್ನ 2.30ಕ್ಕೆ ನಿಗಧಿಯಾಗಿದ್ದ ಸಾಮಾನ್ಯ ಸಭೆಗೆ ಹಾಜರಾಗಿದ್ದರು. ಕಳೆದ ವಾರವೂ ಬಿಜೆಪಿಯ 14 ಮಂದಿಯೂ ಗೈರು ಹಾಜರಾಗಿದ್ದರು.

ಸಭೆ ನಡೆಯುವ ಬಗ್ಗೆ ಸದಸ್ಯರಿಗೆಲ್ಲ ಮಂಗಳವಾರವೇ ಮಾಹಿತಿ ನೀಡಲಾಗಿದೆ. ಸದಸ್ಯರ ಗೈರಿನಿಂದ ಮತ್ತೆ ಸಭೆ ರದ್ದುಗೊಂಡಿದೆ. ಮುಂದೆ ಆ.6 ರಂದು ಮತ್ತೆ ಸಭೆ ನಡೆಸಬೇಕೆಂದು ಅಧ್ಯಕ್ಷರು ಸೂಚಿಸಿದ್ದಾರೆ. ಅದರಂತೆ ಸಭೆ ಕರೆಯಲು ನಿರ್ಧರಿಸಲಾಗಿದೆ. ಅಂದೂ ಕೂಡಾ ಸಭೆ ರದ್ದುಗೊಂಡರೆ ತಾಲ್ಲೂಕು ಪಂ. ಕಾರ್ಯ ನಿರ್ವಹಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಪಿಡಿಒ ಕುಶಾಲಿನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News