ಪಣಂಬೂರು: ಗೃಹರಕ್ಷಕ ದಳದಿಂದ ವನಮಹೋತ್ಸವ
Update: 2018-08-01 20:59 IST
ಮಂಗಳೂರು, ಆ.1: ಪಣಂಬೂರು ಕೇಂದ್ರೀಯ ವಿದ್ಯಾಲಯದ ವತಿಯಿಂದ ಗೃಹರಕ್ಷಕ ದಳದ ಪಣಂಬೂರು ಘಟಕದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು.
ದ.ಕ.ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲಿ ಮೋಹನ್ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟ ರಮೇಶ್, ಪ್ರಾಂಶುಪಾಲ ಗಣೇಶ್ ಎಸ್. ಇಂದ್ರಾಲಿ, ಕೃಷ್ಣದಾಸ್, ಶುಭಾ, ನಮಿತಾ ರಾಜೇಶ್, ಟಿ. ರಾಜಶೇಖರನ್, ಕುನ್ಹಾಲ್, ನಾರಾಯಣ ನಾಯ್ಕ ಕೆ. ಉಪಸ್ಥಿತರಿದ್ದರು.
ಪಣಂಬೂರು ಘಟಕದ ಅಧಿಕಾರಿ ಹರೀಶ್ ಆಚಾರ್ಯ, ಪಣಂಬೂರು ಘಟಕದ ಹಿರಿಯ ಗೃಹರಕ್ಷಕ ಶಿವಪ್ಪನಾಯ್ಕ, ಗಂಗಾಧರ, ಕೆ. ಜಗದೀಶ್, ಸುಬ್ರಹ್ಮಣ್ಯ, ರಾಘವೇಂದ್ರ ಉಪಸ್ಥಿತರಿದ್ದರು.