ರಸ್ತೆ ಮಧ್ಯೆ 20 ಅಡಿ ಆಳದ ಹೊಂಡಕ್ಕೆ ಬಿದ್ದ ಕಾರು!

Update: 2018-08-01 16:34 GMT

ಲಕ್ನೋ, ಆ.1: ಇಲ್ಲಿನ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ವೇ ಬದಿಯ ಸರ್ವಿಸ್ ರಸ್ತೆ ಇದ್ದಕ್ಕಿದ್ದಂತೆ ಕುಸಿದಿದ್ದು, ಕಾರೊಂದು 20 ಅಡಿ ಆಳದಲ್ಲಿ ಸಿಲುಕಿರುವ ಘಟನೆ ನಡೆದಿದೆ.

“ವಾಝಿದ್ ಪುರ್ ಪುಲಿಯಾದಲ್ಲಿ ಘಟನೆ ಸಂಭವಿಸಿದೆ. ಚಾಲಕ ಬ್ರೇಕ್ ಹಾಕಿದ್ದರಿಂದ ವಾಹನ ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ,

ರಸ್ತೆ ಮಧ್ಯೆ ಹೊಂಡ ಕಾಣಿಸಿಕೊಂಡ ತಕ್ಷಣ ತಾನು ಬ್ರೇಕ್ ಹಾಕಿದ್ದೇನೆ. ಆದರೆ ಕಾರು ಹೊಂಡಕ್ಕೆ ಬಿತ್ತು ಎಂದು ಕಾರಿನ ಚಾಲಕ ರಚಿತ್ ಕುಮಾರ್ ಹೇಳಿದ್ದಾರೆ. ಮುಂಬೈಯಿಂದ ಕಾರು ಖರೀದಿಸಿದ್ದ ಅವರು ಗೂಗಲ್ ಮ್ಯಾಪ್ ನೋಡಿಕೊಂಡು ಬರುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News