×
Ad

ಖಾರ್ವಿಕೇರಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳು ದೋಷಿ

Update: 2018-08-01 21:24 IST

ಕುಂದಾಪುರ, ಆ.1: ನಾಲ್ಕು ವರ್ಷಗಳ ಹಿಂದೆ ಖಾರ್ವಿಕೇರಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ದೋಷಿ ಎಂಬುದಾಗಿ ಇಂದು ತೀರ್ಪು ನೀಡಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯ, ಶಿಕ್ಷೆಯ ಪ್ರವಾಣವನ್ನು ಆ.7ರಂದು ಪ್ರಕಟಿಸಲಿದೆ.

ಖಾರ್ವಿಕೇರಿ ನಿವಾಸಿಗಳಾದ ಜೀವನ್ ರಾವ್, ಅರ್ಬಟ್ ಕುಮಾರ್ ಬೆರೆಟ್ಟೋ, ರೋಶನ್ ವಿಲ್ಫ್ರೇಡ್ ಬೆರೆಟ್ಟೋ ಹಾಗೂ ರೋಶನ್ ಎಂಬವರು ದೋಷಿಗಳು. ಕುಂದಾಪುರ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿಯಲ್ಲಿ ಮೇಲ್ ಖಾರ್ವಿಕೇರಿ ನಿವಾಸಿ ಗಣಪತಿ ಖಾರ್ವಿ ಎಂಬವರ ಪುತ್ರ ಪ್ರಮೋದ್ ಕುಮಾರ್ (22) ಎಂಬವರನ್ನು ಆರೋಪಿಗಳು 2014ರ ಜು.13ರಂದು ರಾತ್ರಿ 11:30ರ ಸುಮಾರಿಗೆ ಮರದ ದೊಣ್ಣೆುಂದ ಹೊಡೆದು ಕೊಲೆಗೈದಿದ್ದರು.

ಖಾರ್ವಿಕೇರಿಯ ರಿಂಗ್ ರೋಡ್ ಬಳಿಯ ಸಾಪ್ಟ್ ಡ್ರಿಂಕ್ಸ್ ಫ್ಯಾಕ್ಟರಿಯಲ್ಲಿ ಸೋಡಾ ಬಾಟಲಿ ತೆಗೆದಿದ್ದ ಕಾರಣಕ್ಕೆ ಈ ಕೊಲೆ ಮಾಡಲಾಗಿತ್ತು ಎಂದು ದೂರಲಾಗಿದೆ. ಪ್ರಮೋದ್ ಮೃತದೇಹ ಜು.14ರಂದು ಹೊಳೆಯಲ್ಲಿ ಪತ್ತೆಯಾಗಿತ್ತು.

ಆಗಿನ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ತನಿಖೆ ನಡೆಸಿ, ಆರೋಪಿ ಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ 15 ಸಾಂದರ್ಭಿಕ ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿ ಪ್ರಾಯ ಪಟ್ಟು ತೀರ್ಪು ನೀಡಿದರು. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News