×
Ad

ಬಸ್ ಢಿಕ್ಕಿ: ಬೈಕ್‌ ಸವಾರ ಮೃತ್ಯು

Update: 2018-08-01 22:00 IST

ಮಂಗಳೂರು, ಆ.1: ಕುಳಾಯಿಯಿಂದ ಹೊಸಬೆಟ್ಟುವಿಗೆ ತೆರಳುತ್ತಿದ್ದ ಬೈಕ್‌ಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯ ಗೊಂಡು ಮೃತಪಟ್ಟ ಘಟನೆ ಹೊಸಬೆಟ್ಟುವಿನ ಜಂಕ್ಷನ್ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಸರಕೊಪ್ಪ-ಹಳಸೂರು ನಿವಾಸಿ ಮರಿಯಪ್ಪ ಎಂ.ಕೆ. (40) ಎಂದು ಗುರುತಿಸಲಾಗಿದೆ.

ಮೃತ ಮರಿಯಪ್ಪ ನಗರದಲ್ಲಿ ಸೆಕ್ಯುರಿಟಿ ಸೂಪರ್‌ವೈಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಬೈಕ್‌ನಲ್ಲಿ ಮರಿಯಪ್ಪ ಕುಳಾಯಿಯಿಂದ ಹೊಸಬೆಟ್ಟುವಿಗೆ ತೆರಳುವ ಮಾರ್ಗದಲ್ಲಿ ಹೊಸಬೆಟ್ಟು ಜಂಕ್ಷನ್ ಬಳಿ ಯು-ಟರ್ನ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಉಡುಪಿ ಕಡೆಯಿಂದ ಮಂಗಳೂರಿಗೆ ಖಾಸಗಿ ಬಸ್‌ನ್ನು ಚಲಾಯಿಸಿಕೊಂಡು ಬರುತ್ತಿದ್ದ ಕಾರ್ಕಳ ನಿವಾಸಿ, ಚಾಲಕ ಸಲ್ಮಾನ್ ಬೈಕ್‌ಗೆ ಢಿಕ್ಕಿ ಹೊಡೆಸಿದ್ದಾರೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಮರಿಯಪ್ಪ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಲ್ಕಿಯ ಆಸ್ಪತ್ರೆಯಲ್ಲಿ ಮೃತವ್ಯಕ್ತಿಯ ಶವ ಪರೀಕ್ಷೆ ನಡೆಸಲಾಗುತ್ತಿದೆ.ಈ ಕುರಿತು ಮಂಗಳೂರು ನಗರ ಸಂಚಾರ ಉತ್ತರ(ಬಂದರ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News