ಉಚ್ಚಿಲ: ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಂಭ್ರಮ

Update: 2018-08-02 18:09 GMT

ಉಚ್ಚಿಲ, ಆ. 2: ಬೋವಿ ಹಿರಿಯ ಪ್ರಾಥಮಿಕ ಶಾಲೆ ಸೋಮೇಶ್ವರ, ಉಚ್ಚಿಲ ಇದರ  ಶತಮಾನೋತ್ಸವದ ಸಂಭ್ರಮಕ್ಕೆ ಶಾಲೆಯ ವಜ್ರ ಮಹೋತ್ಸವ ಕಟ್ಟಡದಲ್ಲಿ ಚಾಲನೆ ನೀಡಲಾಯಿತು.

ಶಾಲಾ ಕಟ್ಟಡದ ಮುಂಭಾಗ ನೀಲೇಶ್ವರ ಕೆ ಯು ಪದ್ಮನಾಭ ತಂತ್ರಿಯವರಿಂದ ಶತಮಾನೋತ್ಸವದ ಧ್ವಜ ಹಾರಿಸುವ ಮುಖಾಂತರ ಚಾಲನೆ  ನೀಡಿಲಾಯಿತು. ಶಾಲಾ ಶಿಕ್ಷಕರ ವೃಂದ ಸ್ವಾಗತಿಸಿದರು. ಸಭಾಕಾರ್ಯಕ್ರಮಕ್ಕೆ ಮೊದಲು ಶಾಲಾ ವಿದ್ಯಾರ್ಥಿಗಳು ಪನ್ನೀರು ಮತ್ತು ಹೂವನ್ನು ಹಾರಿಸುವ ಮುಖಾಂತರ ವಜ್ರ ಮಹೋತ್ಸವದ ಕಟ್ಟಡಕ್ಕೆ ಸ್ವಾಗತಿಸಿದರು. ನಂತರ ವಜ್ರ ಮಹೋತ್ಸವದ ವೇದಿಕೆಯಲ್ಲಿ ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಉದ್ಘಾಟನೆ ನಡೆಸಲಾಯಿತು.

ಶಾಲಾ ಮಕ್ಕಳ ಪ್ರಾರ್ಥನೆಯ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ನಂತರ ಶತಮಾನೋತ್ಸವ ಸಮಿತಿಯ ಅದ್ಯಕ್ಷರಾದ ಶ್ರೀ ಎನ್. ಜಿ. ಮೋಹನ್ ಶಾಲೆಯ ನೂರು ವರ್ಷಗಳ ಇತಿಹಾಸವನ್ನು ಪ್ರಾಸ್ತಾವಿಕದ ಮುಖಾಂತರ ಸಭೆಯಲ್ಲಿ ವಿವರವಾಗಿ ತಿಳಿಸಿದರು.

 ಜು. 31 ರಂದು ನೂರನೇ ಜನ್ಮದಿನವನ್ನು ಆಚರಿಸಿದ ಬೋವಿ ಸಮಾಜದ ಹಿರಿಯ ನೇತಾರ ಶ್ರೀ ನಾರಾಯಣ ತಲಾಬಾಡಿ ಅವರು ಶತಮಾನೋತ್ಸವಕ್ಕೆ ದೀಪ ಉರಿಸುವ ಮೂಲಕ ಉದ್ಘಾಟನೆ ಮಾಡಿ, ಶುಭಾಶಯ ತಿಳಿಸಿದರು.

ನಂತರ ಮುಖ್ಯ ಅಥಿತಿಗಳಾದ ಕೆ. ಯು.ಪದ್ಮನಾಭ ತಂತ್ರಿ ಮಾತಾನಾಡಿ ಶಾಲೆಯ ಹಳೇ ವಿದ್ಯಾರ್ಥಿಯಾಗಿ ಬಾಲ್ಯದ ನೆನಪಿನ ಬುತ್ತಿಯನ್ನು ವಿಸ್ತಾರವಾಗಿ ವಿವರಿಸಿ ಕಾರ್ಯಕ್ರಮಕ್ಕೆ  ಶುಭಾ ಹಾರೈಸಿದರು.

ನಂತರ ಸಮಿತಿಯ ಗೌರವ ಅದ್ಯಕ್ಷರು ಮತ್ತು ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ರೇವತಿ ದಾಮೋದರ ಉಚ್ಚಿಲ್ ಇವರು ಶುಭಾ ಹಾರೈಸಿದರು. ಸಭೆಯ ಅದ್ಯಕ್ಷರಾದ ಮೂರುರ ಬೋವಿ ಮಹಾಸಭಾದ ಅದ್ಯಕ್ಷರು ಆದ ಶ್ರೀ ಚಿದಾನಂದ ಉಚ್ಚಿಲ್ ಇವರು ಅಧ್ಯಕ್ಷ ಮಾತುಗಳನ್ನು ಆಡಿದರು.

ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ದೇವ್‍ದಾಸ್. ಟಿ.ಉಚ್ಚಿಲ್, ಉಚ್ಚಿಲ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಮೇಘಲತ ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ರಾಘವ ಆರ್. ಉಚ್ಚಿಲ್ ವಂದಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀ ಪ್ರವೀಣ್ ಬಸ್ತಿ ಮಾಡಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಿತು. ಪೌಢಶಾಲಾ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಕರಾಳ ಚಿತ್ರಣವನ್ನು ನೀಡಿದರು. ಈ ಎಲ್ಲ ಕಾರ್ಯಕ್ರಮಕ್ಕೆ ಶಾಲಾ ಹಳೆ ವಿದ್ಯಾರ್ಥಿ ಗಳು, ಶಾಲಾ ಹಿತೈಷಿಗಳು, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News