ಮಂಗಳೂರು: ಸೈಂಟ್ ಜೋಸೆಫ್ ಸರ್ವಿಸ್ ಸೆಂಟರ್ ನಲ್ಲಿ 'ಮಹಿಳೆಯರಿಗಾಗಿ ವಿಶೇಷ ಸೇವೆ'
Update: 2018-08-02 18:30 IST
ಮಂಗಳೂರು, ಆ. 2: ಬಿಪಿಸಿಎಲ್ ಮಂಗಳೂರು ಸೈಂಟ್ ಜೋಸೆಫ್ ಸರ್ವಿಸ್ ಸೆಂಟರ್ ನಲ್ಲಿ ಮಹಿಳೆಯರಿಗಾಗಿ ವಿಶೇಷ ಸೇವೆ ನೀಡಲು 'ಎಕ್ಸ್ಲೂಸಿವ್ ವುಮನ್ ಪೆಡೆಸ್ಟಲ್' ಇದರ ಉದ್ಘಾಟನೆ ಇಂದು ನೆರೆವೇರಿಸಲಾಯಿತು.
ಫಾ. ಎಂಡ್ರೂ ಡಿಕೋಸ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಕೆದಾರು ಹಾಗೂ ಬಿಪಿಸಿಎಲ್ ಅಧಿಕಾರಿಗಳಿಗೆ ಜೆರೋಸಾ ಶಾಲೆಯ ವಿದ್ಯಾರ್ಥಿಗಳು ಸ್ವಾಗತ ಮಾಡಿದರು. ಬಿಪಿಸಿಲ್ ದಕ್ಷಿಣ ವಲಯ ಮುಖ್ಯಸ್ಥ ಪಿ.ಎಸ್. ರವಿ, ಕರ್ನಾಟಕ ರಾಜ್ಯ ಮುಖ್ಯಸ್ಥ ರಾಹುಲ್ ಟೆಂಡನ್, ವಿನೋದ್ ಟಿ.ಎಮ್. ಗೋರಕ್ ನಾಥ್ ಟಿ.ಸಿ. ಬಿಪಿಸಿಎಲ್ ಮಂಗಳೂರು, ಫಾ. ಎಂಡ್ರೂ ಡಿಕೋಸ್ತಾ, ಸೈಂಟ್ ಜೋಸೆಫ್ ಸರ್ವಿಸ್ ಸೆಂಟರ್ ಜೆಪ್ಪು ಡೀಲರ್ ಹಾಗು ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.
ಮಹಿಳೆಯರಿಗಾಗಿ ಹಾಗು ನಿರಂತರ ಉತ್ಕೃಷ್ಟ ಸೇವೆಯನ್ನು ಮಹಿಳಾ ಸಿಬ್ಬಂದಿಯಿಂದ ಒದಗಿಸುವುದು ಇದರ ವಿಶೇಷತೆಯಾಗಿದ್ದು, ಬಳಕೆದಾರರು ಇದರ ಸದುಪಯೋಗ ಪಡೆಯುವಂತೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.