ಇಮ್ರಾನ್ ಖಾನ್ ನಂಬಿಕಸ್ತ, ಅವರ ಆಹ್ವಾನ ಸ್ವೀಕರಿಸಿದ್ದೇನೆ: ನವಜೋತ್ ಸಿಧು

Update: 2018-08-02 13:54 GMT

ಚಂಡೀಗಢ, ಆ.2: ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಮ್ರಾನ್‌ಖಾನ್ ನೀಡಿರುವ ಆಹ್ವಾನವನ್ನು ಸ್ವೀಕರಿಸಿರುವುದಾಗಿ ಪಂಜಾಬ್‌ನ ಸಚಿವ, ಮಾಜಿ ಕ್ರಿಕೆಟರ್ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಇದೊಂದು ದೊಡ್ಡ ಗೌರವವಾಗಿದ್ದು ನಾನು ಆಹ್ವಾನವನ್ನು ಸ್ವೀಕರಿಸಿದ್ದೇನೆ.

ಬುದ್ಧಿವಂತ ಜನರನ್ನು ಶ್ಲಾಘಿಸುತ್ತಾರೆ, ಅಧಿಕಾರದಲ್ಲಿರುವ ಜನರ ಬಗ್ಗೆ ಹೆದರಿಕೆ ಇರುತ್ತದೆ ಆದರೆ ಯೋಗ್ಯ ವ್ಯಕ್ತಿಗಳ ಮೇಲೆ ವಿಶ್ವಾಸ ಇರಿಸಬಹುದು. ಖಾನ್ ಸಾಹೇಬರು ಯೋಗ್ಯ ವ್ಯಕ್ತಿ. ಅವರನ್ನು ನಂಬಬಹುದು. ಕ್ರೀಡಾಳುಗಳು ಸಂಪರ್ಕ ಸೇತುಗಳಾಗಿ ಜನತೆಯನ್ನು ಒಗ್ಗೂಡಿಸುತ್ತಾರೆ ಎಂದು ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದು ಹೇಳಿದರು. ಇದು ಇಮ್ರಾನ್‌ಖಾನ್ ನೀಡಿರುವ ವೈಯಕ್ತಿಕ ಆಮಂತ್ರಣ. ರಾಜಕೀಯ ಹಿನ್ನೆಲೆಯ ಆಮಂತ್ರಣವಲ್ಲ. ಇಮ್ರಾನ್ ರಾಜಕೀಯದಲ್ಲಿ ಶೂನ್ಯದಿಂದ ಮೇಲೆದ್ದು ಬಂದವರು. ಅವರಲ್ಲಿ ಆಶಾಕಿರಣವನ್ನು ನಾನು ಕಂಡಿದ್ದೇನೆ ಎಂದು ಸಿದು ಹೇಳಿದ್ದಾರೆ. ಇಮ್ರಾನ್‌ಖಾನ್ ಆಗಸ್ಟ್ 11ರಂದು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News