ಆಧಾರ್‌ನಲ್ಲಿ ವಿಳಾಸ ಬದಲಿಸಲು ನೂತನ ವಿಧಾನ: ಯುಐಡಿಎಐ

Update: 2018-08-02 14:25 GMT

ಹೊಸದಿಲ್ಲಿ, ಆ. 2: ಆಧಾರ ಗುರುತು ಕಾರ್ಡ್‌ನಲ್ಲಿ ಸುಲಭವಾಗಿ ವಿಳಾಸ ಬದಲಾಯಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಶೀಘ್ರ ನೂತನ ವ್ಯವಸ್ಥೆಯೊಂದನ್ನು ಜಾರಿಗೆ ತರಲಿದೆ. ಪ್ರಸ್ತುತ ಇರುವ ಸ್ಥಳದ ಸಮರ್ಪಕ ದಾಖಲೆ ಇಲ್ಲದ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಲು ನೆರವಾಗಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಈ ನೂತನ ಸೇವೆಯನ್ನು ಎಪ್ರಿಲ್ 1ರಂದು ಆರಂಭಿಸಲು ನಿರ್ಧರಿಸಿದೆ. ಸಾಮಾನ್ಯವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರು, ವಲಸಿಗರು ತಮ್ಮ ವಿಳಾಸ ಬದಲಾಯಿಸುವ ಸಮಸ್ಯೆ ಎದುರಿಸುತ್ತಿರುತ್ತಾರೆ. ಪ್ರಸ್ತಾಪಿತ ನೂತನ ವ್ಯವಸ್ಥೆಯಲ್ಲಿ ಆಧಾರ್ ಕಾರ್ಡ್ ಹೊಂದಿರುವವರು ಸೀಕ್ರಿಟ್ ಪಿನ್ ನಂಬರ್ ಹೊಂದಿದ ಆಧಾರ್ ಪತ್ರ ಪಡೆಯುವ ಅವಕಾಶ ಇದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ತಿಳಿಸಿದೆ. ‘‘ಸ್ವೀಕಾರಾರ್ಹ ದಾಖಲೆ ಇಲ್ಲದ ವಿಳಾಸ ಹೊಂದಿರುವ ನಿವಾಸಿಗಳು ಆಧಾರ್ ಪತ್ರದ ಮೂಲಕ ವಿಳಾಸ ಪರಿಶೀಲನೆಗೆ ತಮ್ಮ ಮನವಿ ಸಲ್ಲಿಸಬಹುದು. ಪ್ರಾಧಿಕಾರದಿಂದ ಪತ್ರ ಸ್ವೀಕರಿಸಿ ಬಳಿಕ ಸೀಕ್ರೆಟ್ ಪಿನ್ ನಂಬರ್ ಬಳಸಿ ಎಸ್‌ಎಸ್‌ಯುಪಿ ಅಥವಾ ಆಧಾರ್ ಸೆಲ್ಫ್ ಸರ್ವೀಸ್ ಅಪ್‌ಡೇಟ್ ಪೋರ್ಟಲ್‌ನಲ್ಲಿ ವಿಳಾಸ ಬದಲಾಯಿಸಬಹುದು’’ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಸೂಚನೆ ತಿಳಿಸಿದೆ. ಈ ಸೇವೆಯನ್ನು 2019 ಜನವರಿ 1ರಿಂದ ಈ ಸೇವೆ ಆರಂಭಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News